ನಿದ್ದೆ ಮಾಡಿ 9 ಲಕ್ಷ ಗೆದ್ದ ‘ಬೆಂಗಳೂರಿನ ಮಹಿಳೆ’

public wpadmin

ಕೇವಲ ನಿದ್ದೆ ಮಾಡಿ 9 ಲಕ್ಷ ರೂ. ಗೆದ್ದಿರುವ ಬೆಂಗಳೂರಿನ ಸಾಯಿಶ್ವರಿ ಪಾಟೀಲ್ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ.
ಹೌದು, ಇತ್ತೀಚಿಗಷ್ಟೇ ಸಾಯಿಶ್ವರಿ ಅವರು ಬೆಂಗಳೂರಿನ ಸ್ಟಾರ್ಟ್ ಅಪ್ ಹೋಮ್ ಆ್ಯಂಡ್ ಸ್ಲೀಪ್ ಸೊಲ್ಯೂಶನ್ ಬ್ರ್ಯಾಂಡ್ ವೇಕ್‌ಫಿಟ್‌ನ ಸ್ಲೀಪ್ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಮೂಲಕ ಅತೀ ಹೆಚ್ಚು ನಿದ್ದೆ ಮಾಡಿ ‘ಸ್ಲೀಪ್ ಚಾಂಪಿಯನ್’ ಪ್ರಶಸ್ತಿಯ ಜೊತೆಗೆ 9 ಲಕ್ಷ ರೂಪಾಯಿ ಬಹುಮಾನ ಗೆದ್ದಿದ್ದಾರೆ.
ವೇಕ್‌ಫಿಟ್ ಕಂಪೆಯಲ್ಲಿ “ಸ್ಲೀಪ್ ಇಂಟರ್ನ್‌ಶಿಪ್” ಅನ್ನು ಆಯೋಜಿಸಲಾಗಿದ್ದು, ಈ ಸ್ಲೀಪ್ ಇಂಟರ್ನ್‌ಶಿಪ್ ದೇಶದಾದ್ಯಂತ ಗಮನ ಸೆಳೆದಿತ್ತು. ಇದು 60 ದಿನಗಳ ಸ್ಲೀಪ್ ಇಂಟರ್ನ್‌ಶಿಪ್. ಇಲ್ಲಿ ಬೇರೇನೂ ಕೆಲಸ ಇಲ್ಲ. 9 ಗಂಟೆಗಳ ಕಾಲ ನಿದ್ರೆ ಮಾಡಬೇಕಾಗುತ್ತದೆ ಅಷ್ಟೇ. ಪವರ್ ನ್ಯಾಪ್‌ಗಳನ್ನು ತೆಗೆದುಕೊಳ್ಳುವ ಮೂಲಕ ಹೊಸ ವೇಕ್‌ಫಿಟ್ ಹಾಸಿಗೆಯನ್ನು ಪರೀಕ್ಷಿಸುವುದು ಅವರ ಕೆಲಸ

Share This Article
Leave a comment