ಬೆಂಗಳೂರು: SSLC ಅರ್ಧವಾರ್ಷಿಕ ಪರೀಕ್ಷೆ ಸಂಕಲನಾತ್ಮಕ ಮೌಲ್ಯ ಮಾಪನ-1 ನಾಳೆಯಿಂದ ಅಕ್ಟೋಬರ್ 1ರವರೆಗೆ ನಡೆಯಲಿದ್ದು, ಇದೇ ಮೊದಲ ಬಾರಿ ರಾಜ್ಯಾದ್ಯಂತ ಏಕರೂಪದ ಪರೀಕ್ಷೆ ನಡೆಯಲಿದೆ.
ಹೌದು, ಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ಶಾಲಾ ಹಂತದಲ್ಲೇ ಪ್ರಶ್ನೆ ಪತ್ರಿಕೆ ತಯಾರಿಸಿ. ಅರ್ಧ ವಾರ್ಷಿಕ ಪರೀಕ್ಷೆ ನಡೆಸಲು ಸೂಚಿಸಲಾಗಿತ್ತು. ಆದರೆ, ಈ ವರ್ಷ ಅದಕ್ಕೆ ಬ್ರೇಕ್ ಹಾಕಿದೆ. ಈ ಸಾಲಿನಿಂದ ಸರ್ಕಾರದ ನಿರ್ದೇಶನದಂತೆ ಅರ್ಧ ವಾರ್ಷಿಕ ಪರೀಕ್ಷೆಗೂ ರಾಜ್ಯಾಧ್ಯಂತ ಏಕರೂಪದ ಪ್ರಶ್ನೆಪತ್ರಿಕೆ ನೀಡಲು ಮಂಡಳಿ ತೀರ್ಮಾನಿಸಿದೆ.
ಈಗಾಗಲೇ ಪ್ರಕಟಿಸಿರುವ ವೇಳಾಪಟ್ಟಿಯಂತೆ ಸೆಪ್ಟೆಂಬರ್.24ರಿಂದ ಅಕ್ಟೋಬರ್ /ರವರೆಗೆ ಎಸ್ ಎಸ್ ಎಲ್ ಸಿ ಅರ್ಧವಾರ್ಷಿಕ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಮಂಡಳಿಯಿಂದಲೇ ಏಕರೂಪದ ಪ್ರಶ್ನೆ ಪತ್ರಿಕೆಯನ್ನು ನೀಡಲಾಗುತ್ತಿದೆ.
ಪರೀಕ್ಷೆ ವೇಳಾಪಟ್ಟಿ
ಸೆ.24- ಪ್ರಥಮ ಭಾಷ (ಕನ್ನಡ, ಹಿಂದಿ, ಇಂಗ್ಲಿಷ್)
ಸೆ.25- ದ್ವಿತೀಯ ಭಾಷ (ಇಂಗ್ಲಿಷ್, ಹಿಂದಿ) ಜೊತೆಗೆ ಅದೇ ದಿನ ಮಧ್ಯಾಹ್ನ (ಹಿಂದಿ, ಕನ್ನಡ, ಇಂಗ್ಲಿಷ್)
ಸೆ. 26-ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್
ಸೆ.27- ಕೋರ್ ವಿಷಯಗಳಾದ ಗಣಿತ, ಸಮಾಜ ಶಾಸ್ತ್ರ. ವಿಜ್ಞಾನ
ಸೆ.28- ರಾಜ್ಯಶಾಸ್ತ್ರ ಹಿಂದೂಸ್ತಾನಿ ಸಂಗೀತ
ಸೆ.30- ಸಮಾಜ ವಿಜ್ಞಾನ,
ಅ.1- ಜೆಟಿಎಸ್ ವಿಷಯಗಳ ಪರೀಕ್ಷೆಗಳು ನಡೆಯಲಿವೆ.