ಬೆಂಗಳೂರು: ನಟ ದರ್ಶನ್ ರೀತಿಯ ದೊಡ್ಡ ವ್ಯಕ್ತಿಯನ್ನು ಪೊಲೀಸ್ರು ಸುಮ್ಮನೆ ಅರೆಸ್ಟ್ ಮಾಡಲು ಸಾಧ್ಯವಿಲ್ಲ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಈ ಸಂಬಂಧ ಮಾತಾಡಿದ ಸುದೀಪ್, ಮೊದಲಿಗೆ ದರ್ಶನ್ ಹೀಗೆ ಮಾಡಿರಲು ಸಾಧ್ಯವಿಲ್ಲ ಅಂತಾ ಅನಿಸಿತ್ತು. ನನಗೆ ಪೊಲೀಸ್ರು ಪರಿಚಯ. ಯಾರು ಅಷ್ಟು ದೊಡ್ಡ ವ್ಯಕ್ತಿಯನ್ನ ಸುಮ್ಮನೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ನನಗೆ ಇದು ಒಂದು ರೀತಿ ಮೋಡ ಕವಿದ ವಾತಾವರಣ ಆಗಿತ್ತು ಎಂದರು.
ಏನು ಸತ್ಯ ಏನು ಸುಳ್ಳು ಎಂದು ನಾವು ನ್ಯೂಸ್ ನೋಡುತ್ತಿದ್ದೆವು. ಒಂದಂತೂ ಸತ್ಯ ಯಾರನ್ನು ಎಷ್ಟು ಇಷ್ಟ ಪಡ್ತೀರಿ? ಯಾರನ್ನ ಎಷ್ಟು ದ್ವೇಷ ಮಾಡ್ತೀರಿ? ಅನ್ನೋದು ಪರ್ಸನಲ್. ಫೈಟ್ ಕೂಡ ಪರ್ಸನಲ್. ಕಾಂಪೀಟಿಷನ್ ಕೂಡ ಇರುತ್ತೆ. ಆದರೆ, ಆ ವ್ಯಕ್ತಿಗೆ ಏನೋ ತೊಂದರೆ ಆಗ್ತಿದೆ ಎಂದಾಗ ಖುಷಿಪಡುವ ವ್ಯಕ್ತಿ ನಾನಲ್ಲ ಎಂದರು.