ಮರಳುಗಾಡಿನಲ್ಲಿ ಕನ್ನಡ ನಟಿಮಣಿಯರು ಶಕಲಕ ಬೂಮ್ ಬೂಮ್ ಅಂತ ಜಾಲಿ ರೈಡ್ ಮಾಡ್ತಿದ್ದಾರೆ. ಹೌದು, ಕನ್ನಡ ಕಿರುತೆರೆಯ ಹಾಗೂ ಬೆಳ್ಳಿತೆರೆಯ ಸ್ಟಾರ್ ನಟಿಯರು ದುಬೈಗೆ ಹಾರಿದ್ದಾರೆ. ಅದರಲ್ಲೂ ಯುನೈಟೆಡ್ ಅರಬ್ನಲ್ಲಿ ಸಖತ್ ಹಾಟ್ ಆಗಿ ಮಿಂಚುತ್ತಿದ್ದಾರೆ.
ಇನ್ನೂ, ನಿನಗಾಗಿ ಸೀರಿಯಲ್ನಲ್ಲಿ ಹೈವೂಲ್ಟೇಜ್ ಸನ್ನಿವೇಶಗಳ ಪ್ರಸಾರವಾಗ್ತಿವೆ. ಶೂಟಿಂಗ್ನಿಂದ್ ಗ್ಯಾಪ್ ತೆಗೆದುಕೊಂಡು ದುಬೈ ಫ್ಲೈಟ್ ಏರಿದ್ದಾರೆ ದಿವ್ಯಾ ಉರುಡುಗ.
ಕಿರುತೆರೆ ನಟಿ, ಬಿಗ್ಬಾಸ್ ಸೀಸನ್ 10ರ ಸ್ಪರ್ಧಿ ನಮ್ರತಾ ಗೌಡ ಅವರು ದುಬೈ ಹಕ್ಕಿ ಜೊತೆ ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ರೆಡ್ ಔಟ್ಫಿಟ್ನಲ್ಲಿ ಚಂದವಾಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಜೊತೆಗೆ ಸ್ಯಾಂಡಲ್ವುಡ್ ಚಲುವೆ ದಿಯಾ ಖುಷಿ ಕೂಡ ಮರಳಿನ ಸುಂದರವಾದ ಸೊಬಗನ್ನು ಸವಿಯತ್ತ ಎಂಜಾಯ್ ಮಾಡುತ್ತಿದ್ದಾರೆ. ಅಂದ್ಹಾಗೆ, ದುಬೈನಲ್ಲಿ ಇಷ್ಟು ಜನ ನಟಿಯರು ಏನ್ ಮಾಡ್ತಿದ್ದಾರೆ ಅಂತ ನಿಮಗೆಲ್ಲಾ ಡೌಡ್ ಬಂದೇ ಬರುತ್ತೆ.
ಇದಕ್ಕೆ ಒಂದು ಕಾರಣ ಕೂಡ ಇದೆ. ರಾಜ್ ಕಪ್ ಕ್ರಿಕೆಟ್ ಟೂರ್ನಮೆಂಟ್ ನಡೆಯುತ್ತಿದೆ. ಹೀಗಾಗಿ ಬ್ರ್ಯಾಂಡ್ ಅಂಬಾಸಿಡರ್ ಆಗಿರೋ ಬೆಡಗಿಯರು ದುಬೈನ ಎಕ್ಸ್ಪ್ಲೋರ್ ಮಾಡುತ್ತಿದ್ದಾರೆ. ಸದ್ಯ ಇವರ ಫೋಟೋಗಳೇ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿವೆ.