ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಶೀಘ್ರದಲ್ಲೇ ಪೋಷಕರಾಗಲಿದ್ದಾರೆ. ‘ಕಲ್ಕಿ 2898 AD’ ನಟಿ ದೀಪಿಕಾ ಈ ವರ್ಷದ ಸೆಪ್ಟೆಂಬರ್ ನಲ್ಲಿ ತನ್ನ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. ಫೆಬ್ರವರಿಯಲ್ಲಿ ದಂಪತಿ ಅಭಿಮಾನಿಗಳೊಂದಿಗೆ ಗುಡ್ ನ್ಯೂಸ್ ಹಂಚಿಕೊಂಡಿದ್ದರು. ದೀಪಿಕಾ ಗರ್ಭಿಣಿಯಾದ ಬಳಿಕ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.
6 ವರ್ಷಗಳಿಗೂ ಹೆಚ್ಚು ಕಾಲ ಡೇಟಿಂಗ್ ಮಾಡಿದ್ದ ಈ ಜೋಡಿ ನವೆಂಬರ್ 2018 ರಲ್ಲಿ ಮದುವೆಯಾದ್ರು. ಮದುವೆಯಾಗಿ 6 ವರ್ಷ ಕಳೆದ ಬಳಿಕ ಈ ಸ್ಟಾರ್ ಜೋಡಿಯ ಮನೆಯಲ್ಲಿ ಶೀಘ್ರದಲ್ಲಿ ಪುಟ್ಟ ಕಂದನ ನಗುವಿನ ಮಂದಹಾಸ ಮೂಡಲಿದೆ. ದೀಪಿಕಾಗೆ ಗಂಡು ಮಗು ಹುಟ್ಟುತ್ತಾ ಅಥವಾ ಹೆಣ್ಣು ಮಗು ಹುಟ್ಟುತ್ತಾ ಎಂದು ತಿಳಿಯಲು ಅಭಿಮಾನಿಗಳು ತುಂಬಾ ಕಾಯ್ತಿದ್ದಾರೆ. ಇದೇ ವೇಳೆ ನಟಿ ಬೇಬಿ ಬಂಪ್ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ.
ನಟಿ ದೀಪಿಕಾ ಪಡುಕೋಣೆ ಬ್ಲ್ಯಾಕ್ ಥೀಮ್ನಲ್ಲಿ ಫೋಟೋಶೂಟ್ ಮಾಡಿದ್ದಾರೆ. ಬ್ಲ್ಯಾಕ್ ಡ್ರೆಸ್ ತೊಟ್ಟ ದೀಪಿಕಾ ಪಡುಕೋಣೆ ಬೇಬಿ ಬಂಪ್ ತೋರಿಸುತ್ತಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ರಣವೀರ್ ಸಿಂಗ್ ಜೊತೆ ದೀಪಿಕಾ ಪಡುಕೋಣೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಪ್ರೆಗ್ನೆಸಿಯ ಸ್ಟನ್ನಿಂಗ್ ಫೋಟೋಗಳನ್ನು ದೀಪಿಕಾ ಪಡುಕೋಣೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ನಟಿ ಫೋಟೋಗಳಿಗೆ ಲೈಕ್ಸ್ ಜೊತೆಗೆ ನಾನಾ ಕಮೆಂಟ್ ಗಳು ಕೂಡ ಹರಿದು ಬರ್ತಿದೆ.
ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ತಮ್ಮ ಮಗುವಿಗಾಗಿ ಭಾರೀ ಕುತೂಹಲದಿಂದ ಕಾಯುತ್ತಿದ್ದಾರಂತೆ. ಪೋಷಕರಾಗಿ ತಮ್ಮ ಜೀವನದ ಹೊಸ ಅಧ್ಯಾಯಯವನ್ನು ಆರಂಭಿಸುವುದಕ್ಕೆ ಇಬ್ಬರೂ ಕೂಡಾ ತುಂಬಾ ಉತ್ಸಾಹದಲ್ಲಿದ್ದಾರೆ ಎನ್ನಲಾಗಿದೆ. ನಟಿಗೆ ಸೆಪ್ಟೆಂಬರ್ 28ಕ್ಕೆ ಡೆಲಿವರಿ ಆಗಲಿದೆ ಎನ್ನಲಾಗಿದೆ.
ದೀಪಿಕಾ ಪಡುಕೋಣೆಗೆ ಗಂಡು ಮಗು ಹುಟ್ಟುತ್ತದೆಯೇ? ಎನ್ನುವ ವಿಚಾರ ಹೆರಿಗೆಯ ನಂತರ ಬಹಿರಂಗಗೊಳ್ಳಲಿದೆ. ಆದರೆ ಖ್ಯಾತ ಜ್ಯೋತಿಷಿಯೊಬ್ಬರು ಹೊಸ ಅತಿಥಿ ಯಾರಾಗಲಿದ್ದಾರೆ ಮತ್ತು ಅವರ ಆಗಮನದಿಂದ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರ ಜೀವನದಲ್ಲಿ ಏನು ಬದಲಾಗಲಿದೆ ಎಂದು ಭವಿಷ್ಯ ನುಡಿದಿದ್ದರು. Koimoi.com ನಲ್ಲಿನ ವರದಿಯ ಪ್ರಕಾರ, ಪಂಡಿತ್ ಜಗನ್ನಾಥ್ ಗುರೂಜಿ ಅವರು ರಣವೀರ್ ಮತ್ತು ದೀಪಿಕಾ ಜನಿಸುವ ಮಗುವಿನ ಬಗ್ಗೆ ಮಾತನಾಡಿದ್ದಾರೆ. ಪಂಡಿತ್ ಜಗನ್ನಾಥ್ ಗುರೂಜಿ ಪ್ರಸಿದ್ಧ ಜ್ಯೋತಿಷಿ ಈ ಹಿಂದೆ 2024ರಲ್ಲಿ ದೀಪಿಕಾ ಗರ್ಭಿಣಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು.
ಪಂಡಿತ್ ಜಗನ್ನಾಥ ಗುರೂಜಿಯವರ ಭವಿಷ್ಯವಾಣಿಯ ಪ್ರಕಾರ, ಈ ಮಗು ತನ್ನ ಹೆತ್ತವರಿಗೆ ರಾಜಕುಮಾರನಾಗ್ತಾನೆ ಅಂದರೆ ಗಂಡು ಮಗುವಾಗುತ್ತದೆ ಎಂದಿದ್ದಾರೆ. ಆ ಮಗು ತನ್ನ ತಂದೆ ತಾಯಿ ಇಬ್ಬರಿಗೂ ಅದೃಷ್ಟವನ್ನು ತರಲಿದ್ದಾನೆ. ಆ ಮಗು ರಣಬೀರ್-ದೀಪಿಕಾ ಪಾಲಿಗೆ ಅದೃಷ್ಟದ ಮಗುವಾಗಲಿದೆ ಎಂದು ಜ್ಯೋತಿಷಿ ಹೇಳಿದ್ದಾರೆ. ಸೌತ್ ಬಾಂಬೆ ಆಸ್ಪತ್ರೆಯಲ್ಲಿ ಡೆಲಿವರಿ ಆಗಲಿದೆ. ಸದ್ಯ ದೀಪಿಕಾ ಪಡುಕೋಣೆ ಕೆಲಸದಿಂದ ಬ್ರೇಕ್ ತೆಗೆದುಕೊಂಡು ಎಂಜಾಯ್ ಮಾಡುತ್ತಿದ್ದಾರೆ. ನಟಿ 2025ರಿಂದ ಮತ್ತೆ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ. ಆದರೆ ಕೆಲವು ತಿಂಗಳು ನಟಿ ಮಗುವಿನ ಜೊತೆಗೆ ಇರಲಿದ್ದಾರಂತೆ. ಮಾರ್ಚ್ ತನಕವೂ ನಟಿ ಮೆಟರ್ನಿಟಿ ಲೀವ್ನಲ್ಲಿ ಇರಲಿದ್ದಾರಂತೆ.