ದೀಪಾವಳಿಗೆ ಟಿಕೆಟ್‌ ದರ ಏರಿಸಿದ್ರೆ ನೋಂದಣಿ ರದ್ದು: ಖಾಸಗಿ ಬಸ್‌ ಕಂಪನಿಗಳಿಗೆ ಸಾರಿಗೆ ಇಲಾಖೆ ಎಚ್ಚರಿಕೆ

public wpadmin

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಇನ್ನೊಂದೇ ವಾರ ಬಾಕಿಯಿದ್ದು, ಹಬ್ಬವನ್ನು ಕುಟುಂಬದವರೊಂದಿಗೆ ಆಚರಿಸಲು ಬೆಂಗಳೂರಿನ ಜನ ತಮ್ಮ ಊರುಗಳತ್ತ ಮುಖ ಮಾಡ್ತಿದ್ದಾರೆ. ಇದನ್ನೇ ನೆಪ ಮಾಡಿಕೊಂಡ ಕೆಲ ಖಾಸಗಿ ಬಸ್ ಕಂಪನಿಗಳು ಏಕಾಏಕಿ ಟಿಕೆಟ್ ದರ ಹೆಚ್ಚಿಸಿ ಪ್ರಯಾಣಿರಿಗೆ ಶಾಕ್ ನೀಡಿದೆ. ಇದನ್ನ ಮನಗೊಂಡ ಸಾರಿಗೆ ಇಲಾಖೆ ಖಾಸಗಿ ಸಾರಿಗೆ ಕಂಪನಿಗಳಿಗೆ ಎಚ್ಚರಿಕೆ ನೀಡಿದೆ.

ಹಬ್ಬದ ಹಿಂದಿನ ದಿನ ಖಾಸಗಿ ಬಸ್‌ಗಳ ಸೀಟ್‌ಗಳೆಲ್ಲಾ ಬಹುತೇಕ ಪುಲ್ ಆಗಿವೆ. ಕೆಲ ಬಸ್ಸಿನಲ್ಲಿ ಬೆರಳೆಣಿಕೆಯಷ್ಟು ಸೀಟುಗಳು ಮಾತ್ರ ಉಳಿದಿವೆ. ಇದರಿಂದಾಗಿ ಹಬ್ಬಕ್ಕೆ ಊರಿಗೆ ಹೊರಡುವ ಪ್ರಯಾಣಿಕರು ಪರದಾಡುವಂತಾಗಿದೆ. 
ನವೆಂಬರ್ 1 ಕನ್ನಡ ರಾಜ್ಯೋತ್ಸವ, 2 ಶನಿವಾರ ಹಾಗೂ 3 ರಂದು ಭಾನುವಾರ ಆಗಿರುವುದರಿಂದ ಮೂರು ದಿನ ಹಬ್ಬ ಹಾಗೂ ರಜೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಊರುಗಳತ್ತ ಮುಖ ಮಾಡಿದ್ದಾರೆ. ಪ್ರಯಾಣಿಕರ ಬೇಡಿಕೆ ಬರುವ ಸಾಧ್ಯತೆ ಇರುವುದರಿಂದ ಖಾಸಗಿ ಬಸ್‌ಗಳು ಹಬ್ಬ ಸಮೀಪದ ದಿನಗಳಲ್ಲಿ ಟಿಕೆಟ್ ದರ ದುಪ್ಪಟ್ಟು ಮಾಡುವ ಸಾಧ್ಯತೆ ಇದ್ದು, ಹೀಗಾಗಿ ಖಾಸಗಿ ಬಸ್‌ಗಳಿಗೆ ಸಾರಿಗೆ ಇಲಾಖೆ ಖಡಕ್ ಎಚ್ಚರಿಕೆ ಕೊಟ್ಟಿದೆ.

Share This Article
Leave a comment