ಬಹುತೇಕ ಮಂದಿಗೆ ಚಳಿಗಾಲ, ಮಳೆಗಾಲ ಮಾತ್ರವಲ್ಲದೇ ವರ್ಷ ಪೂರ್ತಿ ಮನೆಯ ತುಂಬಾ ಚಪ್ಪಲಿ ಹಾಕಿಕೊಂಡು ಓಡಾಡುವ ಅಭ್ಯಾಸ ಇರುತ್ತದೆ. ಅದರಲ್ಲೂ ವಯಸ್ಸಾದವರು ದಿನವಿಡೀ ಚಪ್ಪಲಿ ಹಾಕಿಕೊಂಡೇ ಮನೆಯಲ್ಲಿ ಸುತ್ತಾಡುತ್ತಿರುತ್ತಾರೆ. ಸಾಮಾನ್ಯವಾಗಿ ಹೀಗೆ ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡುವ ಅಭ್ಯಾಸ ಇರುವವರು ಹೊರಗೆ ಸುತ್ತಾಡಲೆಂದೇ ಒಂದು ಚಪ್ಪಲಿ, ಮನೆಯಲ್ಲಿ ಓಡಾಡಲು ಎಂದೇ ಚಪ್ಪಲಿಗಳನ್ನು ಪ್ರತ್ಯೇಕವಾಗಿ ಇಟ್ಟಿರುತ್ತಾರೆ. ಇನ್ನೂ ಕೆಲವರಂತೂ ಮಲಗುವಾಗಲೂ ಕಾಲಿಗೆ ಚಪ್ಪಲಿ ಹಾಕಿಕೊಂಡೇ ಮಲಗುತ್ತಾರೆ.
ಗಟ್ಟಿಯಾದ ಪಾದರಕ್ಷೆಗಳನ್ನು ಧರಿಸುವುದರಿಂದ ಪಾದಗಳು ಬೇಗ ತಣ್ಣಗಾಗುವುದಿಲ್ಲ. ಇದರಿಂದ ನಿಮಗೆ ಜ್ವರ ಕೂಡ ಬರುವುದಿಲ್ಲ. ಚಪ್ಪಟೆಯಾದ ಪಾದರಕ್ಷೆಗಳನ್ನು ಧರಿಸುವುದರಿಂದ ರಕ್ತ ಪರಿಚಲನೆ ನಾರ್ಮಲ್ ಆಗಿರುತ್ತದೆ. ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ನ್ಯೂಯಾರ್ಕ್ ನಗರದಲ್ಲಿರುವ ಪಾದದ ತಜ್ಞ ಜಾಕಿ ಸುತೇರಾ, ಬಿಗಿಯಾದ ಮಹಡಿಗಳಲ್ಲಿ ಬರಿಗಾಲಿನಲ್ಲಿ ನಡೆದಾಡುವುದು ನೋವು ಉಂಟು ಮಾಡುತ್ತದೆ. ಆದ್ದರಿಂದ ಬೂಟುಗಳನ್ನು ಧರಿಸಬೇಕು. ಆದರೆ ನಾವು ಧರಿಸುವ ಬೂಟುಗಳು ಯಾವಾಗಲೂ ಮೃದುವಾಗಿರಬೇಕು ಎಂದು ತಿಳಿಸಿದ್ದಾರೆ.
ರಕ್ತ ಸಂಚಾರದಲ್ಲಿ ತೊಂದರೆಯಾದರೆ ಪಾದಗಳು ಊದಿಕೊಳ್ಳುತ್ತವೆ. ಪಾದಗಳನ್ನು ಬೆಚ್ಚಗೆ ಇಡುವುದರಿಂದ ರಕ್ತ ಪರಿಚಲನೆ ಹೆಚ್ಚುತ್ತದೆ. ಆದರೆ, ಶೂ ಪಾದದ ಗಾತ್ರಕ್ಕೆ ಸರಿಯಾಗಿದೆಯೇ ಎಂಬುವುದನ್ನು ಖಚಿತ ಪಡಿಸಿಕೊಳ್ಳಿ. ಇಡೀ ದಿನ ಬರಿಗಾಲಿನಲ್ಲಿ ನಡೆಯುವುದರಿಂದ ಪಾದಗಳ ಮೇಲೆ ಒತ್ತಡ ಬೀಳುತ್ತದೆ. ನೋವು, ಊದಿಕೊಳ್ಳುವ ಸಮಸ್ಯೆ ಉಂಟಾಗುತ್ತದೆ. ಆದರೆ ಚಪ್ಪಟೆಯಾದ ಪಾದರಕ್ಷೆಗಳನ್ನು ಧರಿಸುವುದರಿಂದ ನೆಲದ ಮೇಲೆ ಓಡಾಡುವಾಗ ಉಂಟಾಗುವ ಒತ್ತಡದಿಂದ ಪಾದಗಳನ್ನು ರಕ್ಷಿಸುತ್ತದೆ.
ಮನೆಯಲ್ಲಿ ಧರಿಸಲು ಯಾವ ರೀತಿಯ ಪಾದರಕ್ಷೆಗಳು ಕಂಫರ್ಟ್ ಅನಿಸುತ್ತದೆಯೋ ಅದನ್ನು ಧರಿಸಿ. ಅದರಲ್ಲೂ ಸ್ಪಂಜ್ ಮತ್ತು ಲೆದರ್ ಪಾದರಕ್ಷೆ ಧರಿಸಲು ಸೂಕ್ತವಾಗಿರುತ್ತದೆ. ಆದರೆ ಗಾತ್ರ ಸರಿಯಾಗಿರಬೇಕು ಅಷ್ಟೇ. ಇಲ್ಲದಿದ್ದರೆ ಗಟ್ಟಿಯಾಗಿರುವ ಪ್ಲಾಸ್ಟಿಕ್ ಸ್ಲಿಪ್ಪರ್ ಕೂಡ ನೀವು ಧರಿಸಬಹುದು. ಶೂ, ಚಪ್ಪಲಿಗಳಿಗೂ ಇದೆಯಾ ಎಕ್ಸ್ಪೈರಿ ಡೇಟ್?: ಸಾಮಾನ್ಯವಾಗಿ ಯಾವುದೇ ಔಷಧವನ್ನು ಮೆಡಿಕಲ್ ಸ್ಟೋರ್ನಿಂದ ಖರೀದಿಸುವಾಗ ಅದರ ಮುಕ್ತಾಯ ದಿನಾಂಕವನ್ನು ಚೆಕ್ ಮಾಡ್ತೇವೆ. ಎಕ್ಸ್ಪೈರಿ ಡೇಟ್ ಮುಗಿದ ಬಳಿಕ ಯಾವುದೇ ವಸ್ತು, ಔಷಧಗಳನ್ನು ಬಳಸಬಾರದು.
ವಾಸ್ತವವಾಗಿ, ಎಲ್ಲಾ ವಸ್ತುಗಳು ಮುಕ್ತಾಯ ದಿನಾಂಕವನ್ನು ಹೊಂದಿವೆ. ಒಂದು ಐಟಂ ಅನ್ನು ಎಷ್ಟು ದಿನಗಳವರೆಗೆ ಬಳಸಬಹುದು ಎಂದು ಅದು ಹೇಳುತ್ತದೆ. ಚಪ್ಪಲಿ ಅಥವಾ ಶೂ ಈಗ ಎಲ್ಲರೂ ಬಳಸುತ್ತಾರೆ. ಆದರೆ ಇದಕ್ಕೂ ಎಕ್ಸ್ಪೈರಿ ಡೇಟ್ ಇದೆ ಎಂದರೆ ನೀವು ನಂಬಬಹುದೇ? ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ರಬ್ಬರ್ ರೀತಿಯ ಚಪ್ಪಲಿಗಳು 6 ತಿಂಗಳಷ್ಟು ಎಕ್ಸ್ಪೈರಿ ಡೇಟ್ ಹೊಂದಿರುತ್ತದೆಯಂತೆ.