ಬಳ್ಳಾರಿ: ಪರಪ್ಪನ ಅಗ್ರಹಾರ ಜೈಲಿನಿಂದ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿ 2 ವಾರಕ್ಕೂ ಅಧಿಕ ದಿನ ಕಳೆಯುತ್ತಾ ಬಂದಿದ್ದಾರೆ. ಸದ್ಯ ಜೈಲಿನಲ್ಲಿ ಟೈಂ ಪಾಸ್ ಆಗದೆ ದರ್ಶನ್ ಹೈರಾಣಾಗಿದ್ದಾರೆ. ಅತ್ತ ಆರೋಪಿಯ ಇನ್ನಿತರ ಬೇಡಿಕೆಗೂ ಸರಿಯಾಗಿ ಸ್ಪಂದಿಸದೆ ಇರುವುದರಿಂದ ತಲೆಕೆಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ದರ್ಶನ್ ಟಿವಿ ಬೇಕು ಎಂದು ಬೇಡಿಕೆ ಇಟ್ಟಿದ್ದರು. ಆದರೆ 10 ದಿನಗಳಿಂದ ಸೆಲ್‌ಗೆ ಟಿವಿ ವ್ಯವಸ್ಥೆ ಸಿಗದೆ ಅತ್ತ ಟೈಂ ಪಾಸ್ ಆಗದೆ ತಲೆಕೆಡೆಸಿಕೊಂಡಿದ್ದಾರೆ. ಹೀಗಾಗಿ ಒಂಟಿತನದಿಂದ ಕಾಲ ಕಳೆಯಲು ದರ್ಶನ್ ಪರದಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಸಾಲು ಸಾಲು ಸರ್ಕಾರಿ ರಜೆಯಿಂದಾಗಿ ದರ್ಶನ್ ಬೇಸರಗೊಂಡಿದ್ದಾರೆ. 10 ದಿನಗಳಿಂದ ಟಿವಿ ವ್ಯವಸ್ಥೆ ಸಿಗದೆ ಚಿಂತಿಸುತ್ತಿದ್ದಾರೆ. ಹೊರ ಜಗತ್ತಿನ ಮಾಹಿತಿ ತಿಳಿಯಲು ದರ್ಶನ್ ಕಾತುರಾಗಿದ್ದಾರೆ.
ಎರಡು ದಿನಗಳ ಹಿಂದೆ ಜೈಲಾಧಿಕಾರಿಗಳು ಟಿವಿ ರಿಪೇರಿಗೆ ಕಳುಹಿಸಿದ್ದಾರೆ. ಮಂಗಳವಾರ ಸೆಲ್‌ಗೆ ಟಿವಿ ನೀಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ ದರ್ಶನ್‌ನ ಮೂರನೇ ಬೇಡಿಕೆ ಇಡೇರಿಕೆಗೆ ಜೈಲಾಧಿಕಾರಿಗಳು ಮುಂದಾಗಿದ್ದಾರೆ.