ದರ್ಶನ್ ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮಿ

public wpadmin

ಕೊಲೆ ಪ್ರಕರಣದ ಆರೋಪ ಎದುರಿಸುತ್ತಿರುವ ದರ್ಶನ್ ನೋಡಲು 9ನೇ ಬಾರಿ ಬಳ್ಳಾರಿ ಜೈಲಿಗೆ ಪತ್ನಿ ವಿಜಯಲಕ್ಷ್ಮಿ ಭೇಟಿ ಕೊಟ್ಟಿದ್ದಾರೆ. ಅತ್ತಿಗೆ ವಿಜಯಲಕ್ಷ್ಮಿ ದಿನಕರ್ ತೂಗುದೀಪ ಕೂಡ ಜೈಲಿಗೆ ಭೇಟಿ ನೀಡಿದ್ದಾರೆ.

ಬೇಲ್ ರಿಜೆಕ್ಟ್ ಆದ ಬಳಿಕ ಮೊದಲ ಬಾರಿಗೆ ವಿಜಯಲಕ್ಷ್ಮಿ , ದಿನಕರ್, ಚಂದ್ರು, ಸುಶಾಂತ್ ನಾಯ್ಡು ಸೇರಿದಂತೆ 6 ಜನ ಜೈಲಿಗೆ ಭೇಟಿ ಕೊಟ್ಟಿದ್ದಾರೆ. ಪ್ರತಿ ಬಾರಿಯಂತೆ ಇಂದು (ಅ.18) ಕೂಡ ಎರಡು ಬ್ಯಾಗ್‌ಗಳಲ್ಲಿ ಬಟ್ಟೆ, ಡ್ರೈ ಫ್ರೂಟ್ಸ್, ಬೇಕರಿ ತಿನಿಸುಗಳನ್ನು ತಂದಿದ್ದಾರೆ. ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿರುವ ದರ್ಶನ್‌ಗೆ ಚಿಕಿತ್ಸೆಗೆ ಸಹಕರಿಸುವಂತೆ ಪತ್ನಿ ಮನವಿ ಮಾಡಿದ್ದಾರೆ. ಆ ನಂತರ ಕಾನೂನು ಸಮರದ ಕುರಿತು ಚರ್ಚಿಸಿದ್ದಾರೆ.

ಅಂದಹಾಗೆ, ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರವಾಗಿ ಜೂನ್ 11ರಂದು ದರ್ಶನ್ ಅರೆಸ್ಟ್ ಆಗಿದ್ದರು.

Share This Article
Leave a comment