ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್ (Darshan) ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನ.26 ಕ್ಕೆ ಮುಂದೂಡಿದೆ.
ಕೊಲೆ ಕೇಸ್‌ನ ದರ್ಶನ್, ಪವಿತ್ರಾಗೌಡ ಸೇರಿ ಆರು ಆರೋಪಿಗಳ ಜಾಮೀನು ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಾಯಿತು. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು ವಿಚಾರಣೆಯನ್ನು ಮುಂದೂಡಿದ್ದಾರೆ.
ಈಗ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡ್ತಾ ಇದ್ದೀವಿ. ಇನ್ನೂ ನಮಗೆ ಆರೋಗ್ಯದ ಬಗ್ಗೆ ವರದಿ ಸಿಕ್ಕಿಲ್ಲ. ಒಂದು ವಾರದಲ್ಲಿ ಕೋರ್ಟ್‌ಗೆ ಹಾಕಿದ್ದಾರೆ. ಸೀಲ್ಡ್ ಕವರ್ ಅಲ್ಲಿ ನೀಡಿದ್ದಾರೆ. ನಮಗೆ ಗೊತ್ತಾಗ್ತಿಲ್ಲ ಎಷ್ಟು ದಿನ ಚಿಕಿತ್ಸೆ ಮುಂದುವರೆಯಬೇಕು ಅಂತ ನಮಗೂ ಒಂದು ಕಾಪಿ ನೀಡಬಹುದಲ್ವಾ ಎಂದ ಎಸ್‌ಪಿಪಿ ಪ್ರಸನ್ನಕುಮಾರ್ ವಾದಿಸಿದರು.
ಈ ವೇಳೆ ದರ್ಶನ್ ಪರ ವಾದ ಮಂಡಿಸಿದ ಸಿ.ವಿ.ನಾಗೇಶ್, ಹೊಸದಾಗಿ ಮತ್ತೊಂದು ರಿಪೋರ್ಟ್ ನೀಡಿದರು. ಅಲ್ಲದೇ, ಶನಿವಾರಕ್ಕೆ ವಾದ ಮಂಡನೆಗೆ ಅವಕಾಶ ಕೋರಿದರು.