ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 5ಕ್ಕೆ ಮುಂದೂಡಿ ಸಿಸಿಹೆಚ್ 57ನೇ ನ್ಯಾಯಾಲಯವು ಆದೇಶ ಹೊರಡಿಸಿದೆ.
ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೆದಿದ್ದು. ಹಿರಿಯ ವಕೀಲ ಸಿಎನ್ ನಾಗೇಶ್ ಅವರು ಇಂದು ದರ್ಶನ್ ಪರ ವಾದ ಮಂಡಿಸಿದರು. ಕಳೆದ ಎರಡು ವಾರದಿಂದಲೂ ದರ್ಶನ್‌ಗೆ ಜಾಮೀನು ಅರ್ಜಿ ಮುಂದೂಡಿಕೆ ಆಗುತ್ತಲೇ ಬಂದಿದ್ದು, ಇಂದು ಕೊನೆಗೂ ಸಿವಿ ನಾಗೇಶ್ ಅವರು ದರ್ಶನ್ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ದಿನದ ಅಂತ್ಯಕ್ಕೆ ಪ್ರಕರಣದ ವಿಚಾರಣೆಯನ್ನು ನಾಳೆ ಮಧ್ಯಾಹ್ನ 12:30ಕ್ಕೆ ಮುಂದೂಡಿಕೆ ಮಾಡಲಾಯಿತು.
ಕೊನೆಯಲ್ಲಿ ರಿಕವರಿ ಮತ್ತು ಸ್ವಇಚ್ಚಾ ಹೇಳಿಕೆಯ ಸಂದೇಹ & ವ್ಯತ್ಯಾಸಗಳ ಬಗ್ಗೆ ಸಿ.ವಿ ನಾಗೇಶ್ ವಾದ ಮಂಡಿಸಿದರು. ಇಲ್ಲಿ ಪೊಲೀಸ್ ರಿಕವರಿ ಸ್ವೀಕರಿಸುವಂತಹದ್ದು ಅಲ್ಲ. ಹೇಳಿಕೆಯೂ ಸಹ ಸ್ವಿಕರಿಸುವಂತಹದ್ದಲ್ಲ. ಇಲ್ಲಿ ಸಮಾನ್ಯ ನಿಯಮವನ್ನು ಪೊಲೀಸರು ಅನುಸರಿಸಬೇಕು. ಸಾಕ್ಷಿಯೂ ಪ್ಲಾಂಟೆಂಡ್ ಸಾಕ್ಷಿಯಾಗಿದೆ. 37 ಲಕ್ಷ ಹಣವನ್ನು ಸೀಜ್ ಮಾಡಿದ್ದಾರೆ. ಸಾಕ್ಷಿಗಳ ಕೊಂಡುಕೊಳ್ಳಲು ಹಣ ಬೇಕು ಎಂದಿದ್ದಾರೆ ಎಂದು ಹೇಳಿ ನಾಳೆಗೆ ವಾದ ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ.