ದರ್ಶನ್ ಗೆ IT ಅಧಿಕಾರಿಗಳ ಡ್ರಿಲ್; ನಗುತ್ತಲೇ ವಿಚಾರಣೆಗೆ ಬಂದ ದಾಸ!

public wpadmin

ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿರುವ ದರ್ಶನ್, ಜಾಮೀನಿಗೆ ಅರ್ಜಿ ಹಾಕಿದ್ದಾರೆ.
ಸದ್ಯ ಜಾಮೀನು ಅರ್ಜಿ ವಿಚಾರಣೆ ಚಾಲ್ತಿಯಲ್ಲಿದ್ದು, ಇದೇ 29ಕ್ಕೆ ಆದೇಶ ಪ್ರಕಟವಾಗುವ ಸಾಧ್ಯತೆ ಇದೆ.

ಇನ್ನು ಜಾಮೀನು ಸಿಕ್ಕು ತಾವು ಹೊರಗೆ ಬರುವ ಉಮೇದಿನಲ್ಲಿ ದರ್ಶನ್ ಇರುವ ಸಂದರ್ಭದಲ್ಲಿಯೇ ಅವರ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿದೆ.
ಹೌದು, ಐಟಿ ಅಧಿಕಾರಿಗಳು ದರ್ಶನ್ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಇಂದು ಬಳ್ಳಾರಿ ಜೈಲಿಗೆ ಭೇಟಿ ನೀಡಿ ದರ್ಶನ್ ವಿಚಾರಣೆ ನಡೆಸಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣ ಮುಚ್ಚಿಹಾಕಲು ಬಳಸಿದ್ದ ಹಣ, ದರ್ಶನ್ ಮನೆ ಮೇಲೆ ನಡೆದ ದಾಳಿ ವೇಳೆ ಸಿಕ್ಕ ಹಣ ಸೇರಿದಂತೆ ಇನ್ನಿತರ ವಿಚಾರಗಳ ವಿಚಾರಣೆ ನಡೆಸಲು ಐಟಿ ಅಧಿಕಾರಿಗಳು ಬಳ್ಳಾರಿ ಜೈಲಿಗೆ ಆಗಮಿದ್ದು. ನಟ ದರ್ಶನ್ ನಗು ನಗುತ್ತಲೇ ಐಟಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗಿದ್ದಾರೆ.

Share This Article
Leave a comment