ಬೆಂಗಳೂರು: ಜಾಮೀನಿನ ಬಳಿಕ ಆಸ್ಪತ್ರೆಗೆ ದಾಖಲಾಗಿರುವ ನಟ ದರ್ಶನ್‌ಗೆ ಇದೀಗ ವೈದ್ಯಕೀಯ ಕ್ಷೇತ್ರದಲ್ಲಿ ಯಾವ ಚಿಕಿತ್ಸೆ ಕೊಡಬೇಕು ಎನ್ನುವುದೇ ಒಂದು ದೊಡ್ಡ ಚರ್ಚೆಯಾಗಿದೆ.
ರೇಣುಕಾಸಾಮಿ ಕೊಲೆ ಪ್ರಕರಣದ ಹಿನ್ನೆಲೆ ಬಳ್ಳಾರಿ ಜೈಲಿನಲ್ಲಿದ್ದ ನಟ ದರ್ಶನ್‌ಗೆ ಅ.3 ರಂದು ಮಧ್ಯಂತರ ಜಾಮೀನು ಸಿಕ್ಕಿತ್ತು. ಬಳಿಕ ಒಂದು ದಿನ ಸಂಪೂರ್ಣ ವಿಶ್ರಾಂತಿಯ ಬಳಿಕ ನ.1ರಂದು ದರ್ಶನ್ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಸ್ಪತ್ರೆಗೆ ದಾಖಲಾದ ಬಳಿಕ ದರ್ಶನ್‌ಗೆ ಫಿಜಿಯೋಥೆರಪಿನಾ? ಅಥವಾ ಆಪರೇಷನ್‌ನಾ? ಎಂದು ಚರ್ಚೆ ನಡೆಯುತ್ತಿದೆ. ಇತ್ತ ಕಾಣಿಸಿಕೊಂಡಿರುವ ನೋವಿಗೆ ಎಕ್ಸಾಮಿನೇಷನ್ ಆಗುವ ತನಕ ಚಿಕಿತ್ಸೆ ಹೇಗೆ ಎಂದು ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ಕೂಡ ರಿಪೋರ್ಟ್‌ಗಳಿಗಾಗಿ ಕಾಯುತ್ತಿದ್ದಾರೆ.
ಈ ಹಿಂದೆ ಕೂಡ ಇದೇ ರೀತಿ ಬೆನ್ನು ನೋವಿಗೆ ಸಂಬಂಧಿಸಿದಂತೆ ಆಪರೇಷನ್ ಮಾಡಿ ಚಿಕಿತ್ಸೆ ನೀಡಲಾಗಿತ್ತು. ಈಗ ಮತ್ತೆ ಬೆನ್ನಿನಲ್ಲೇ ಸಮಸ್ಯೆ ಉಲ್ಬಣ ಆಗಿದ್ದು, ಆಪರೇಷನ್ ಬದಲು ವೈದ್ಯರು ಫಿಜಿಯೋಥೆರಪಿಗೆ ಹೆಚ್ಚು ಮನ್ನಣೆ ಕೊಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಕುಟುಂಬದವರು ಸಹ ಶಸ್ರ್ತಚಿಕಿತ್ಸೆಯನ್ನು ಕೊನೆಯ ಆಯ್ಕೆಯಾಗಿ ಪರಿಗಣಿಸುವಂತೆ ಮನವಿ ಮಾಡಿದ್ದಾರೆ.
ಈ ಹಿಂದೆ ಕೂಡ ಇದೇ ರೀತಿ ಬೆನ್ನು ನೋವಿಗೆ ಸಂಬಂಧಿಸಿದಂತೆ ಆಪರೇಷನ್ ಮಾಡಿ ಚಿಕಿತ್ಸೆ ನೀಡಲಾಗಿತ್ತು. ಈಗ ಮತ್ತೆ ಬೆನ್ನಿನಲ್ಲೇ ಸಮಸ್ಯೆ ಉಲ್ಬಣ ಆಗಿದ್ದು, ಆಪರೇಷನ್ ಬದಲು ವೈದ್ಯರು ಫಿಜಿಯೋಥೆರಪಿಗೆ ಹೆಚ್ಚು ಮನ್ನಣೆ ಕೊಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಕುಟುಂಬದವರು ಸಹ ಶಸ್ರ್ತಚಿಕಿತ್ಸೆಯನ್ನು ಕೊನೆಯ ಆಯ್ಕೆಯಾಗಿ ಪರಿಗಣಿಸುವಂತೆ ಮನವಿ ಮಾಡಿದ್ದಾರೆ.
ದರ್ಶನ್‌ಗೆ ಉಂಟಾಗಿರುವ ಬೆನ್ನು ನೋವಿನಿಂದಾಗಿ ಎಡಗಾಲಿಗೂ ಕೂಡ ದೊಡ್ಡಮಟ್ಟದ ಸಮಸ್ಯೆಯಾಗಿ ಕಾಡುತ್ತಿದೆ. ಜೈಲಿಂದ ರಿಲೀಸ್ ಆದ ದಿನಕ್ಕೂ ನಿನ್ನೆ ಆಸ್ಪತ್ರೆಗೆ ಬಂದ ದಿನಕ್ಕೂ ನೋವು ಕೊಂಚ ಹೆಚ್ಚಾದಂತೆ ಕಾಣುತ್ತಿದೆ.
ಸ್ಪೈನಲ್ ಕಾರ್ಡ್ ಸಮಸ್ಯೆಯಿಂದ ಆರಂಭವಾದ ಬೆನ್ನುನೋವು, ಈಗ ಕಾಲುಗಳಿಗೂ ಸಮಸ್ಯೆ ಉಂಟುಮಾಡುತ್ತಿದೆ. ಹಾಗಾಗಿ ಬೆನ್ನು ನೋವು ಜೊತೆಗೆ ಎಡಗಾಲೂ ನೋವಿದ್ದರೆ ರೋಗಿಯ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರಲಿದೆ? ಅದರಿಂದ ದೇಹದ ಮೇಲಾಗುವ ಪರಿಣಾಮ ಏನು? ಎನ್ನುವುದನ್ನು ವೈದ್ಯರು ತಿಳಿಸಬೇಕಾಗಿದೆ.
ವೈದ್ಯರು ಹೇಳೋದೇನು?
ವೈದ್ಯರ ಮಾಹಿತಿಯ ಪ್ರಕಾರ, ಮೊದಲಿಗೆ ಬೆನ್ನು ನೋವು ಹೆಚ್ಚಾಗುತ್ತಿದ್ದಂತೆ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳಲಿದೆ. ಬಳಿಕ ನಡೆಯಲು ಸಮಸ್ಯೆ ಎದುರಾಗಿ ಹಂತ ಹಂತವಾಗಿ ಸಮಸ್ಯೆ ಇರುವ ಕಾಲಿನಲ್ಲಿ ಮರಗಟ್ಟುವಿಗೆ ಶುರುವಾಗುತ್ತದೆ. ಆಗ ಕಾಲು ಬೆರಳಿನಿಂದ ಆರಂಭವಾಗಿ ಇಡೀ ಕಾಲಿಗೆ ವೇಗವಾಗಿ ಮರಗಟ್ಟುವಿಕೆ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದ ಕಾಲಿನ ಚಲನೆಗೆ ಕೂಡ ಕಷ್ಟವಾಗಿ ಕಾಲು ಸಂಪೂರ್ಣ ನಿಶಕ್ತಿಗೆ ಒಳಗಾಗುತ್ತದೆ. ನಡೆಯಲು ಕಷ್ಟವಾದಾಗ, ಪಾರ್ಶ್ವವಾಯು ಆಗುವ ಸಾಧ್ಯತೆ ಹೆಚ್ಚಾಗುತ್ತದೆ. ಹಾಗಾಗಿ ಶೀಘ್ರದಲ್ಲಿ ಅಗತ್ಯ ಚಿಕಿತ್ಸೆ ನೀಡಬೇಕು ಎನ್ನುತ್ತಾರೆ ವೈದ್ಯರು.