ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ವಿರುದ್ಧ ಕೋರ್ಟ್ಗೆ ಹೆಚ್ಚುವರಿ ಚಾರ್ಜ್ಶೀಟ್ ಸಲ್ಲಿಕೆ ಮಾಡಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.
2ನೇ ಚಾರ್ಜ್ಶೀಟ್ನಲ್ಲಿ ಸಾವಿರಕ್ಕೂ ಅಧಿಕ ಪುಟಗಳಿವೆ. ಇದರಲ್ಲಿ ಮತ್ತಷ್ಟು ಮಾಹಿತಿಗಳನ್ನ ಸಂಪೂರ್ಣವಾಗಿ ಸಂಗ್ರಹಿಸಲಾಗಿದ್ದು ಇಂದು ಸಂಜೆ ಅಥವಾ ನಾಳೆ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಕೆ ಮಾಡುವ ಸಾಧ್ಯತೆ ಇದೆ. ಇದರಲ್ಲಿ 20ಕ್ಕೂ ಅಧಿಕ ಸಾಕ್ಷಿಗಳು, ಹಲವು ಎಫ್ಎಸ್ಎಲ್ ವರದಿಗಳು ಇವೆ.
ಕೋರ್ಟ್ಗೆ ಹೆಚ್ಚುವರಿ ಚಾರ್ಜ್ಶೀಟ್ ಸಲ್ಲಿಕೆ ಮಾಡುವುದರಿಂದ ರೇಣುಕಾಸ್ವಾಮಿ ಪ್ರಕರಣದ ಎಲ್ಲ ಆರೋಪಿಗಳಿಗೆ ಮತ್ತಷ್ಟು ಸಂಕಷ್ಟ ಹೆಚ್ಚಾಗಲಿದೆ. ಈಗ ಕೋರ್ಟ್ಗೆ ಸಲ್ಲಿಕೆ ಮಾಡಲು ರೆಡಿ ಮಾಡಿರುವ ಚಾರ್ಜ್ಶೀಟ್ನಲ್ಲಿ ಇನ್ನಷ್ಟು ಸತ್ಯಾಂಶ ಇದೆ. ಅಲ್ಲದೇ ನಟ ದರ್ಶನ್ಗೆ ಇದು ದೊಡ್ಡ ಹಿನ್ನಡೆಯಾಗಲಿದೆ.
ಘಟನೆ ನಡೆದ ಶೆಡ್ನ ಸ್ಥಳದಲ್ಲಿನ ಕ್ಲಿಕ್ ಮಾಡಿದಂತ ಎರಡು ಫೋಟೋಗಳನ್ನು ಪೊಲೀಸರು ರಿಕವರಿ ಮಾಡಿದ್ದಾರೆ. ಪ್ರತ್ಯಕ್ಷದರ್ಶಿ ಪುನೀತ್ ಮೊಬೈಲ್ನಲ್ಲಿದ್ದ ಎರಡು ಫೋಟೋಗಳನ್ನು ಭಯದಿಂದ ಡಿಲೀಟ್ ಮಾಡಿದ್ದರು. ಆದರೆ ಈ ಫೋಟೋಗಳನ್ನು ಪೊಲೀಸರು ರಿಟ್ರೀವ್ ಮಾಡಿದ್ದಾರೆ. ದೋಷಾರೋಪ ಪಟ್ಟಿಯಲ್ಲಿ ಈ 2 ಫೋಟೋಗಳು ಸೇರಿವೆ. ದರ್ಶನ್ ಅವರು ಬ್ಲೂ ಟೀ-ಶರ್ಟ್ ಹಾಗೂ ಕಪ್ಪು ಕಲರ್ ಜೀನ್ಸ್ ಧರಿಸಿಕೊಂಡು ಶೆಡ್ನಲ್ಲಿ ಎಲ್ಲರ ಜೊತೆ ನಿಂತಿದ್ದಾರೆ. ಪೊಲೀಸ್ ಮೂಲಗಳಿಂದ ನ್ಯೂಸ್ಫಸ್ಟ್ಗೆ ಮಾಹಿತಿ ಲಭ್ಯವಾಗಿದೆ.