ದರ್ಶನ್‌ಗೆ ಬೇಲ್ ಸಿಕ್ಕಿದ್ದಕ್ಕೆ ಮನಸ್ಸು ನಿರಾಳ ಆಗಿದೆ: ತರುಣ್ ಸುಧೀರ್

public wpadmin

ದರ್ಶನ್‌ಗೆ ಕೊಲೆ ಪ್ರಕರಣ ಸಂಬಂಧ 6 ವಾರಗಳ ಕಾಲ ಮಧ್ಯಂತರ ಜಾಮೀನು ಸಿಕ್ಕ ಬೆನ್ನಲ್ಲೇ ‘ಕಾಟೇರ’ ನಿರ್ದೇಶಕ ತರುಣ್ ಸುಧೀರ್ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್‌ಗೆ ಬೇಲ್ ಸಿಕ್ಕಿದ್ದಕ್ಕೆ ಈಗ ಮನಸ್ಸು ನಿರಾಳ ಆಗುತ್ತಿದೆ ಎಂದು ತರುಣ್ ‘ಪಬ್ಲಿಕ್ ಟಿವಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ದರ್ಶನ್‌ಗೆ ಬೇಲ್: ಇದು ದೀಪಾವಳಿ ಗಿಫ್ಟ್ ಎಂದು ಸಂತಸ ವ್ಯಕ್ತಪಡಿಸಿದ ಸಂಜನಾ ಗಲ್ರಾನಿ

ದರ್ಶನ್ ಜಾಮೀನು ಸುದ್ದಿ ಕೇಳಿ ಈಗ ಮನಸ್ಸು ನಿರಾಳ ಆಗುತ್ತಿದೆ. ಅವರಿಗೆ ಆರೋಗ್ಯ ಸಮಸ್ಯೆ ಇತ್ತು ಅಲ್ಲ. ಹಾಗಾಗಿ ನಿರಾಳ, ಬೇರೆ ಯಾವದ್ದಕ್ಕೂ ಅಲ್ಲ. ಅವರು ಆರೋಪಿಯಷ್ಟೇ ಅಪರಾಧಿ ಅಲ್ಲ. ಮುಂದೆ ಅವರು ನಿರಪರಾಧಿ ಆಗಿ ಬಂದ್ಮೇಲೆ ಅನಾರೋಗ್ಯ ಸಮಸ್ಯೆಯಿಂದ ತೊಂದರೆ ಆಗಬಾರದು ಅಲ್ವೇ? ಎಂದಿದ್ದಾರೆ. ನಾನು ಹಾಸನಾಂಬ ದೇವಿಯ ದರ್ಶನ ಮಾಡಿ ಅವರ ಬಗ್ಗೆ ಕೇಳಿಕೊಂಡಿದ್ದು ನಿಜ. ನಾನೋನು ಅಲ್ಲ, ಅವರ ಬಗ್ಗೆ ಸಾವಿರಾರು ಅಭಿಮಾನಿಗಳು ದೇವರಲ್ಲಿ ಕೇಳಿಕೊಂಡಿದ್ದರು. ವಿಜಯಲಕ್ಷ್ಮಿ ಅತ್ತಿಗೆ ಬಹಳ ಕಷ್ಟಪಟ್ಟಿದ್ದಾರೆ. ಅವರ ಕಷ್ಟಕ್ಕೂ ದೇವರು ಸ್ಪಂದಿಸಿರಬಹುದು ಎಂದು ತರುಣ್ ಪ್ರತಿಕ್ರಿಯೆ ನೀಡಿದ್ದಾರೆ.

ದರ್ಶನ್‌ಗೆ ಬಹಳ ದಿನದಿಂದ ಬೆನ್ನು ನೋವಿನ ಸಮಸ್ಯೆ ಇತ್ತು. ಆದರೆ ಅವರು ಎಂದೂ ತೋರಿಸಿಕೊಳ್ಳುತ್ತಿರಲಿಲ್ಲ. ‘ಕಾಟೇರ’ ಸಿನಿಮಾದಲ್ಲಿ ಬಾಯಲ್ಲಿ ಕತ್ತಿ ಕಚ್ಚಿಕೊಂಡು ಹೊಡೆದಾಡುವ ಸೀನ್ ಚಿತ್ರೀಕರಿಸುವಾಗ ದರ್ಶನ್ ಕುಂಟುತ್ತಾ ಇದ್ದರು. ಇದರ ಬಗ್ಗೆ ಅವರು ಮೊದಲೇ ಹೇಳಿರಲಿಲ್ಲ. ಆ ನಂತರ ಬ್ಯಾಕ್ ಪೇನ್ ಇದೆ. ಸ್ಪೈನಲ್ ಸಮಸ್ಯೆ ಇದೆ ಅದಕ್ಕೆ ನಡೆಯೋದು ಕಷ್ಟ ಎಂದು ದರ್ಶನ್ ಶೂಟಿಂಗ್ ವೇಳೆ ಹೇಳಿಕೊಂಡಿದ್ದರು ಎಂದು ತರುಣ್ ತಿಳಿಸಿದರು.

ನನಗಿರುವ ಸಮಸ್ಯೆಯನ್ನು ಹೆಚ್ಚು ತೋರಿಸಿಕೊಂಡವರಲ್ಲ. ಅದಕ್ಕೆ ಅವರು ನಡೆಯೋಕೂ ಕಷ್ಟಪಡ್ತಿದ್ದರು. ಅವರು ಭಾರದ ಡಂಬಲ್ಸ್ ಎಲ್ಲಾ ಎತ್ತುತ್ತಿದ್ದರು. ಈಗ ಎರಡು ಬ್ಯಾಗ್ ಎತ್ತೋಕೆ ಕಷ್ಟಪಟ್ಟಿದ್ದು ನೋಡಿದ್ರೆ, ಅವರಿಗೆ ದೊಡ್ಡ ಸಮಸ್ಯೆನೇ ಆಗಿರುತ್ತದೆ ಎಂದಿದ್ದಾರೆ. ‘ನವಗ್ರಹ’ ರೀ- ರಿಲೀಸ್ ಆಗ್ತಿದೆ ಈ ಬಗ್ಗೆ ಖುಷಿ ಇದೆ. ದೀಪಾವಳಿ ಹಬ್ಬ ನಮ್ಮಗೆಲ್ಲಾ ಇದು ಹೊಸ ವರ್ಷ. ಮುಂದೆ ಕಾನೂನು ಸಮರದ ಹೋರಾಟದಲ್ಲಿ ಅವರು ನಿರಪರಾಧಿ ಆಗಿ ಬರಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ತರುಣ್ ಮಾತನಾಡಿದ್ದಾರೆ.

Share This Article
Leave a comment