ತುಪ್ಪವನ್ನು ಪುರಾತನ ಕಾಲದಿಂದ ಹಿಡಿದು ಇಂದಿನ ಆಧುನಿಕ ಕಾಲದವರೆಗೂ ಒಂದು ಅತ್ಯದ್ಭುತ ಆರೋಗ್ಯಕರ ಆಹಾರ ಪದಾರ್ಥ ಎಂದೇ ಭಾವಿಸಲಾಗಿದೆ. ಆ ರೀತಿಯ ಪೋಷಕಾಂಶಗಳು ತುಪ್ಪದಲ್ಲಿ ಇದೆ. ಹೀಗಾಗಿಯೇ ಇದರ ಶ್ರೇಷ್ಠತೆಯ ಇತಿಹಾಸವನ್ನು ನಾವು ಸಹಸ್ರಾರು ವರ್ಷಗಳಿಂದ ನೋಡುತ್ತಾ ಬಂದಿದ್ದೇವೆ. ತುಪ್ಪದಲ್ಲಿ ವಿಟಮಿನ್ ಎ,ಡಿ, ಇ ಮತ್ತು ಕೆ ಗಳಿವೆ. ತುಪ್ಪ ದೇಹಕ್ಕೆ ಬೇಕಾಗುವ ಎಲ್ಲಾ ರೀತಿಯ ನ್ಯೂಟ್ರಿಯಂಟ್ಸ್ ಒದಗಿಸುತ್ತದೆ. ಆರೋಗ್ಯಕರ ಕೊಲೆಸ್ಟ್ರಾಲ್ ಸುಧಾರಣೆ ಮಾಡುವುದರೊಂದಿಗೆ ಅನೇಕ ರೀತಿಯ ರೋಗಗಳಿಂದ ನಮ್ಮನ್ನು ಕಾಪಾಡುತ್ತದೆ.
ತುಪ್ಪವನ್ನು ಹೆಚ್ಚು ಸೇವನೆ ಮಾಡುವುದರಿಂದ ಶೇಕಡಾ 11 ರಷ್ಟು ವಿಟಮಿನ್ ಇ ನಮ್ಮ ದೇಹವನ್ನು ಸೇರಿಕೊಳ್ಳುತ್ತದೆ ಮತ್ತು ಶೇಕಡಾ 100ರಷ್ಟು ವಿಟಮಿನ್ ಎ ದೊರಕುತ್ತದೆ. ಆದರೆ ಜರ್ನಲ್ ಆಫ್ ಫುಡ್ ಕಾಂಪೋಸಿಷನ್ ಅಂಡ್ ಅನಾಲಸಿಸ್ ಹೇಳುವ ಪ್ರಕಾರ ತುಪ್ಪದಲ್ಲಿ ಓಲೈಕ್ ಆ್ಯಸಿಡ್ ಎಂಬ ಅಂಶವೂ ಕೂಡ ಇದೆ ಒಮೇಗಾ -3 ಎ ಲೈನೊಲೆನಿಕ್ ಆ್ಯಸಿಡ್ನಂತಹ ಅಂಶಗಳು ಕೂಡ ತುಪ್ಪದಲ್ಲಿವೆ.
ವರ್ಷಾನುಗಟ್ಟಲೇ ತುಪ್ಪವನ್ನು ನಮ್ಮ ಆಹಾರದ ಒಂದು ಭಾಗ ಮಾಡಿಕೊಂಡಲ್ಲಿ ಕೊಂಚ ಅಪಾಯವಿದೆ ಎಂದು ತಜ್ಞರು ಹೇಳುತ್ತಾರೆ. ಇದು ಹೃದಯ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ತುಪ್ಪವನ್ನು ಸೇವಿಸುವುದರಿಂದ ತ್ವಚೆಯ ಕಾಂತಿ ಹೊಳೆಯುತ್ತದೆ. ಇದು ದೇಹದಿಂದ ಟಾಕ್ಸಿನ್ ತೆಗೆದು ಹಾಕುತ್ತದೆ. ಕಣ್ಣಿನ ಆರೋಗ್ಯಕ್ಕೆ ತುಪ್ಪ ಸರ್ವಶ್ರೇಷ್ಠ ಮದ್ದು. ದೈಹಿಕ ಹಾಗೂ ಬೌದ್ಧಿಕ ಶಕ್ತಿಯನ್ನು ಕೂಡ ತುಪ್ಪ ಉತ್ತಮಗೊಳಿಸುತ್ತದೆ. ಹೀಗಾಗಿ ತುಪ್ಪ ಕೆಲವರ ಆಹಾರ ಕ್ರಮದಲ್ಲಿ ಕಡ್ಡಾಯ ಎನ್ನುವ ಮಟ್ಟಿಗೆ ಇದೆ. ಆದ್ರೆ ಕೆಲವರು ಈ ತುಪ್ಪದಿಂದ ದೂರ ಇರುವುದೇ ಒಳ್ಳೆಯದು.
ಡೈಜೆಷಷನ್ ಸಮಸ್ಯೆ ಇರುವವರು ತುಪ್ಪದಿಂದ ದೂರ ಇರುವುದೇ ಒಳ್ಳೆಯದು. ಅಸಿಡಿಟಿಯಂತ ಸಮಸ್ಯೆ, ಹುಳಿತೇಗು ಸಮಸ್ಯೆ ಸೇರಿದಂತೆ ಸರಿಯಾಗಿ ಪಚನಕ್ರಿಯೆ ಆಗದವರು ತುಪ್ಪದಿಂದ ದೂರ ಉಳಿಯುವುದೇ ವಾಸಿ. ಇವರು ತುಪ್ಪವನ್ನು ಸೇವಿಸುವುದರಿಂದ ಹೊಟ್ಟೆಯುಬ್ಬರ, ವಾಕರಿಕೆ ಮತ್ತು ಅಪಚನದಂತಹ ಸಮಸ್ಯೆಗಳು ಇನ್ನಷ್ಟು ಹೆಚ್ಚು ಸೃಷ್ಟಿಯಾಗುತ್ತವೆ. ಪಚನಕ್ರಿಯೆ ಸಮಸ್ಯೆ ಇರುವವರು ತುಪ್ಪವನ್ನು ಸೇವಿಸುವುದರಿಂದ ಗಾಲ್ಬ್ಲಾಡರ್ ಮೇಲೆಯೂ ಕೂಡ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.