ಹೊಸಪೇಟೆ: ತುಂಗಭದ್ರಾ ಜಲಾಶಯದ ಎಲ್ಲಾ 33 ಕ್ರೆಸ್ಟ್ ಗೇಟ್‌ಗಳನ್ನು ಬದಲಾಯಿಸಲು ಮುಂದಾಗಿರುವ ಸರ್ಕಾರಕ್ಕೆ ರಾಜ್ಯದ ಮೂರು ಪ್ರಮುಖ ಉಕ್ಕಿನ ಕಾರ್ಖಾನೆಗಳು ಸಾಥ್ ನೀಡಲು ಮುಂದೆ ಬಂದಿವೆ.
ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿರುವ ಜೆಎಸ್‌ಡಬ್ಲ್ಯು ಉಕ್ಕಿನ ಕಾರ್ಖಾನೆ, ನಾರಾಯಣ ಮತ್ತು ಹಿಂದೂಸ್ತಾನ್ ಇಂಜಿನಿಯರಿಂಗ್ ವರ್ಕ್ಸ್ ಕಾರ್ಖಾನೆಗಳು ಕ್ರೆಸ್ಟ್ ಗೇಟ್ ಬದಲಾವಣೆ ಯೋಜನೆಗೆ ಕಬ್ಬಿಣ ಒದಗಿಸಲಿವೆ ಎಂದು ಮೂಲಗಳು ತಿಳಿಸಿವೆ.
ಆಗಸ್ಟ್ 10 ರಂದು ಅಣೆಕಟ್ಟಿನ ಕ್ರೆಸ್ಟ್ ಗೇಟ್ ಒಡೆದು ನೀರಿನಲ್ಲಿ ಕೊಚ್ಚಿಹೋದ ಘಟನೆಯ ನಂತರ ತಜ್ಞರ ತಂಡ ತಾತ್ಕಾಲಿಕ ಸ್ಟಾಪ್ಲಾಗ್ ಗೇಟ್ ಅಳವಡಿಸಿತ್ತು. ನಂತರ ಒಂದು ವಾರದಲ್ಲಿ ಕ್ರೆಸ್ಟ್ ಗೇಟ್ ನ್ನು ಮರುಸ್ಥಾಪನೆ ಮಾಡಲಾಯಿತು. ಇದೀಗ ಸರ್ಕಾರ ಎಲ್ಲಾ 33 ಕ್ರೆಸ್ಟ್ ಗೇಟ್ ಗಳನ್ನು ಬದಲಾಯಿಸಲು ಮುಂದಾಗಿದ್ದು, ಈ ಯೋಜನೆಗೆ ಮೂರು ಕಾರ್ಖಾನೆಗಳು ಸಹಾಯ ಹಸ್ತ ಚಾಚಿವೆ.
ತುಂಗಭದ್ರಾ ಕ್ರೆಸ್ಟ್ ಗೇಟ್ ಬದಲಾವಣೆಗೆ 3 ಸ್ಟೀಲ್ ಫ್ಯಾಕ್ಟರಿಗಳು ಸಾಥ್..!
Leave a comment
Leave a comment