ಸ್ಯಾಂಡಲ್ವುಡ್ ನಟ ದರ್ಶನ್ ಅವರು ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಆರೋಪವನ್ನು ಎದುರಿಸುತ್ತಿರುವ ನಟ ದರ್ಶನ್ ಅವರು ಪರಪ್ಪನ ಅಗ್ರಹಾರದಲ್ಲಿದ್ದಾಗ ತಕ್ಕಮಟ್ಟಿಗೆ ಆರೋಗ್ಯವಾಗಿಯೇ ಇದ್ದರು. ಆದರೆ ಬಳ್ಳಾರಿಗೆ ಶಿಫ್ಟ್ ಆದ ನಂತರ ನಟ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.
ನಟ ದರ್ಶನ್ ಗೆ ತೀವ್ರ ಬೆನ್ನುನೋವು ಹಿನ್ನಲೆಯಲ್ಲಿ 9 ವರ್ಷಗಳಿಂದಲೂ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದ್ದು ಸರ್ಜರಿಗೆ ಒಳಗಾಗದೇ ಇದ್ದರೆ ದರ್ಶನ್ ಗೆ ಅಪಾಯ ಆಗಲಿದೆಯಾ ಎನ್ನುವ ಚರ್ಚೆ ಶುರುವಾಗಿದೆ. ದರ್ಶನ್ ಬೆನ್ನುನೋವು ಪರೀಕ್ಷೆ ನಡೆಸಿದ ವೈದ್ಯಾಧಿಕಾರಿಗಳು ದಾಖಲಿಸಿದ ವರದಿಯಲ್ಲಿ ಹಲವು ಮಾಹಿತಿ ಉಲ್ಲೇಖಿಸಲಾಗಿದೆ.
ಬಿಮ್ಸ್ ಆರ್ಥೋ ವಿಭಾಗದ ಮುಖ್ಯಸ್ಥ ಡಾ ವೇಂಕಟೇಶಲು ನೇತೃತ್ವದಲ್ಲಿ ದರ್ಶನ್ ತಪಾಸಣೆ ಮಾಡಲಾಗಿದ್ದು ಬೆನ್ನುನೋವು ಬಗ್ಗೆ ಇತ್ತೀಚಿಗೆ ಜೈಲಿಗೆ ಭೇಟಿ ನೀಡಿ ತಪಾಸಣೆ ಮಾಡಲಾಗಿತ್ತು. ಎಂಆರ್ ಐ ಶಿಫಾರಸ್ಸು ಮಾಡಿದ್ದ ವೈದ್ಯರ ಸಲಹೆ ನಿರಾಕರಿಸಿದ್ದ ದರ್ಶನ್ ಬೆಂಗಳೂರಿನಲ್ಲಿಯೇ ತೋರಿಸುವುದಾಗಿ ಹೇಳಿದ್ದರು.
ಬಿಮ್ಸ್ ವೈದ್ಯರ ತಂಡ ಹೀಗಾಗಲೇ ಬಿಮ್ಸ್ ನಿರ್ದೇಶಕರಿಗೆ ವರದಿ ನೀಡಿದೆ. ಬಿಮ್ಸ್ ನಿರ್ದೇಶಕರಿಂದ ವರದಿ ಜೈಲು ಅಧೀಕ್ಷಕರ ಕೈ ಸೇರಿಲ್ಲ. ವೈದ್ಯರು ನೀಡಿದ ವರದಿಯಲ್ಲಿನ ಅಂಶಗಳು ದರ್ಶನ್ ಗೆ ತೀವ್ರ ಬೆನ್ನುನೋವು ಇರೋದು ಖಾತ್ರಿ ಪಡಿಸಿವೆ ಎಂದು ಹೇಳಲಾಗುತ್ತಿದೆ.
ಕಳೆದ 9 ವರ್ಷಗಳಿಂದಲೂ ಬೆನ್ನುನೋವು ಸಂಬಂಧ ನಟ ದರ್ಶನ್ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಮಣಿಪಾಲ್ ಆಸ್ಪತ್ರೆಯ ವೈದ್ಯರು ಭವಿಷ್ಯದಲ್ಲಿ ಸರ್ಜರಿ ಅವಶ್ಯಕತೆ ಬಗ್ಗೆ ಪ್ರಸ್ತಾಪ ಮಾಡಿದ್ದರು ಎಂದು ಹೇಳಲಾಗಿದೆ.