ಡಿಜೆ ಸೌಂಡ್ ಇಷ್ಟಾನಾ? ಚೂರು ಯಾಮಾರಿದ್ರೂ ಕಿವಿ ಹೋಗುತ್ತೆ ಹುಷಾರ್..!

public wpadmin

ಜೋರಾದ ಸೌಂಡಿನಿಂದಾಗಿ ಕಿವಿಗಳಿಗೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತವೆ. ಕಿವಿಯೂ ಅತ್ಯಂತ ಸೂಕ್ಷ್ಮವಾದ ದೇಹದ ಭಾಗ ಅದರ ಬಗ್ಗೆ ನಮಗೆ ಹೆಚ್ಚಿನ ಕಾಳಜಿ ಇರಬೇಕು. ವಿಶೇಷವಾಗಿ ಹೀಗೆ ವಿಪರೀತ ಸೌಂಡ್ ಇರುವ ಜಾಗದಲ್ಲಿ ಮಕ್ಕಳು ಹಾಗೂ ಹಿರಿಯ ಜೀವಿಗಳು ಎಚ್ಚರವಹಿಸಬೇಕು.
ಸದ್ಯ ಗಣೇಶೋತ್ಸವ. ದೊಡ್ಡ ಮಟ್ಟದ ಡಿಜೆ, ಆರ್ಕೆಸ್ಟ್ರಾಗಳು ಗಣೇಶ ವಿಸರ್ಜನೆಯ ಸಮಯದಲ್ಲಿ. ಗಣೇಶನ ಮೆರವಣಿಗೆ ಸಮಯದಲ್ಲಿ ನಮಗೆ ಕೇಳ ಸಿಗೋದು ಸಾಮಾನ್ಯ. ಆದ್ರೆ ಇಂತಹ ಭೀಕರ ಶಬ್ಧದಿಂದಾಗಿ ಶೇಕಡಾ 20ರಷ್ಟು ಜನರಲ್ಲಿ ಕಿವಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಕಿವಿಯಲ್ಲಿ ನೋವು, ಗುಂಯ್ಯ ಎಂದು ರಿಂಗಣಿಸುವಿಕೆಯಂತಹ ಸಮಸ್ಯೆಗಳು ಕಾಡುತ್ತವೆ.


ಪುಣೆಯ ಅಪೋಲೋ ಸ್ಪೆಕ್ಟ್ರಾ ಇಎನ್ಟಿ ವೈದ್ಯರಾದ ಡಾ ಸಶ್ರುತ್ ದೇಶಮುಖ ಹೇಳುವ ಪ್ರಕಾರ 85 ಡಿಸಿಬಲ್ಗಿಂತ ಜಾಸ್ತಿ ಇರುವ ಶಬ್ದಗಳು ಅಂದ್ರೆ ಸೌಂಡ್ಗಳು ಕಿವಿಗೆ ಹಾನಿಯನ್ನುಂಟು ಮಾಡುತ್ತವೆ.ಅದರಲ್ಲೂ ಮಕ್ಕಳು ಹಿರಿಯರಲ್ಲಿ ಇದು ಹೆಚ್ಚು ಕಾಣುತ್ತದೆ. ಮುಖ್ಯವಾಗಿ NIHL (NOISE INDUCED HEARING LOSS)ನಂತಹ ಸಮಸ್ಯೆಗಳು ಕಾಡಲು ಶುರುವಾಗುತ್ತವೆ. ಈ ಸಮಸ್ಯೆ ತಾತ್ಕಲಿಕವಾಗಿ ಉಳಿಯಬಹುದು ಇಲ್ಲವೇ ದೀರ್ಘಕಾಲಿಕವಾಗಿ ಕಾಡಬಹುದು ಎಂದು ಡಾ ಸುಶ್ರುತ್ ಹೇಳಿದ್ದಾರೆ.


ಅತಿಯಾದ ಸೌಂಡ್ ನಮ್ಮ ಕಿವಿಯೊಳಗಿನ ಕೇಳುವಿಕೆಯ ನರವನ್ನು ಅಂದ್ರೆ ಹಿಯರಿಂಗ್ ನರ್ವ್ಗೆ ಹಾನಿ ಮಾಡುತ್ತದೆ. ಇದು ಕಿವಿಯಲ್ಲಿ ನೋವು, ಊತ ಹಾಗೂ ಯಾವುದೋ ಅಸಹಜತೆಯನ್ನು ಸೃಷ್ಟಿ ಮಾಡಬಹುದು. ಇದರಿಂದ ತಪ್ಪಿಸಿಕೊಳ್ಳುವ ಸುಲಭ ಉಪಾಯಗಳು ಕೂಡ ಇವೆ.
ರಣಕರ್ಕಶ ಶಬ್ದದಿಂದ ಆದಷ್ಟು ದೂರ ಇರಿ ಇಲ್ಲವೇ ಒಂದೇ ಕಡೆ ನಿಲ್ಲದೇ ಆಗಾಗ ದೂರ ಹೋಗಿ ಬ್ರೇಕ್ ತೆಗೆದುಕೊಳ್ಳಿ
ಮನೆಯ ಬಾಗಿಲು ಕಿಟಕಿಗಳನ್ನು ಮುಚ್ಚಿ ಹೈ ಡಿಸಿಬಲ್ ಸೌಂಡ್ಗಳಿಂದ ದೂರ ಇರಿ
ಹೃದ್ರೋಗ ಕ್ಯಾನ್ಸರ್ ಹಾಗೂ ಪಾರ್ಶ್ವವಾಯು ಇದ್ದವರನ್ನು ಆದಷ್ಟು ಕಾಳಜಿ ಮಾಡಿ
ಇಯರ್ ಮಫ್ಸ್ ಇಲ್ಲವೇ ನಾಯ್ಸ್ ಕ್ಯಾನ್ಸಲಿಂಗ್ ಇಯರ್ಫೋನ್ ಯೂಸ್ ಮಾಡಿ
ಇಷ್ಟು ಮಾಡಿದಲ್ಲಿ ನೀವು ಭೀಕರ ಶಬ್ದಗಳಿಂದ ದೂರವಿದ್ದಲ್ಲಿ ಕಿವಿಗೆ ಸಂಬಂಧಿಸಿದ ಸಮಸ್ಯೆಗಳಿಂದಲೂ ದೂರ ಇರಬಹುದು

TAGGED:
Share This Article
Leave a comment