ಕನ್ನಡದ ಬಿಗ್ಬಾಸ್ ಸೀಸನ್ 11ರ ಆಟದ ಕಿಚ್ಚು ಜೋರಾಗಿ ಹೊತ್ತಿ ಉರಿಯುತ್ತಿದೆ. ಕನ್ನಡ ಬಿಗ್ಬಾಸ್ನಲ್ಲಿ ಇತಿಹಾಸದಲ್ಲೇ ಬಂದ ಮೊದಲ ದಿನನೇ ಯಾವ ವೈಲ್ಡ್ ಕಾರ್ಡ್ ಸ್ಪರ್ಧಿನೂ ಈ ಮಟ್ಟಿಗೆ ಸೌಂಡ್ ಮಾಡಿರ್ಲಿಲ್ಲ. ಅಂತದೊಂದು ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದಾರೆ ಶೋಭಾ ಶೆಟ್ಟಿ.
ಬಿಗ್ಬಾಸ್ ಮನೆಗೆ ಶೋಭಾ ಶೆಟ್ಟಿ ಹೊಸಬರಲ್ಲ. ಅವರ ಆ ಖಡಕ್ ಮಾತುಗಾರಿಕೆ ಪಕ್ಕದ ರಾಜ್ಯದಲ್ಲಿ ಜೋರಾಗಿಯೇ ಸದ್ದು ಮಾಡಿತ್ತು. ಅಷ್ಟಕ್ಕೂ ಶೋಭಾ ಶೆಟ್ಟಿ ಯಾರು? ಇಷ್ಟು ದಿನ ಎಲ್ಲಿದ್ರೂ ಏನ್ ಮಾಡ್ತಿದ್ರು? ಮಂಗಳೂರು ಮೂಲದ ಈ ಬೆಡಗಿ ಹುಟ್ಟಿದ್ದು ಬೆಳದಿದ್ದೇಲ್ಲಾ ಬೆಂಗಳೂರಿನಲ್ಲಿ. ಸೂಪರ್ ಹಿಟ್ ಧಾರಾವಾಹಿ ಅಗ್ನಿಸಾಕ್ಷಿ ಮೂಲಕ ಜನಪ್ರಿಯತೆ ಪಡೆದಿದ್ರು ಇಂದಿಗೂ ಇವರನ್ನು ಅಗ್ನಿಸಾಕ್ಷಿ ತನು ಅಂತಲೇ ಜನ ಗುರುತಿಸುತ್ತಾರೆ.
ಶೋಭಾ ಕನ್ನಡ ಕಿರುತೆರೆಯಲ್ಲಿ ಮಿಂಚಿ ಮರೆಯಾದವರು. ಹೌದು, ಅಗ್ನಿಸಾಕ್ಷಿಯಿಂದ ಅರ್ಧಕ್ಕೆ ಹೊರ ಬಂದ ನಟಿ ಅಲ್ಲಿಂದ ತೆಲುಗು ಕಡೆ ಮುಖ ಮಾಡಿದ್ರು. ಕಾರ್ತಿಕ ದೀಪಂ ಎಂಬ ಸೂಪರ್ ಹಿಟ್ ಧಾರಾವಾಹಿ ಡಾಕ್ಟರ್ ಮೋನಿತಾ ಎಂಬ ನೆಗೆಟಿವ್ ಪಾತ್ರದ ಮೂಲಕ ತೆಲುಗು ಪ್ರೇಕ್ಷಕರ ಮನೆ ಮಾತಾದ್ರು.
ಧಾರಾವಾಹಿ ಲೋಕದಿಂದ ರಿಯಾಲಿಟಿ ಶೋನತ್ತ ಮುಖ ಮಾಡಿದ್ರು ಶೋಭಾ. ತೆಲುಗು ಬಿಗ್ ಬಾಸ್ ಸೀಸನ್ 7ರಸ್ಪರ್ಧಿಯಾಗಿ ಕಾಣಿಸಿಕೊಂಡು ಸಿಕ್ಕಾಪಟ್ಟೆ ಸದ್ದು ಮಾಡಿದ್ರು. ಗ್ರ್ಯಾಂಡ್ ಫಿನಾಲೆಗೆ ಒಂದೇ ಹೆಜ್ಜೆ ಬಾಕಿ ಇರೋವಾಗ ಎಲಿಮಿನೇಟ್ ಆಗಿ ಹೊರಬಂದ್ರು. ಗೆಲುವಿನ ಕನಸನ್ನ ನನಸು ಮಾಡಿಕೊಳ್ಳೋಕೆ ಕನ್ನಡದ ಬಿಗ್ ಬಾಸ್ಗೆ ಎಂಟ್ರಿ ಕೊಟ್ಟಿದ್ದು, ಬರ್ತಿದ್ದಂಗೆ ಸ್ಪರ್ಧಿಗಳಿಗೆ ನಡುಕ ಹುಟ್ಟಿಸಿದ್ದಾರೆ.
ಶೋಭಾ ಪ್ಲಸ್ ಅವರ ಮಾತುಗಾರಿಕೆ, ಸಿಡಿಗುಂಡಿನಂತೆ ಸಿಡಿಯೋ ಬೆಡಗಿ. ಆಟದಲ್ಲೂ ಅಷ್ಟೇ ಎಮೋಷನಲ್ ಆಗದೇ ಇಂಡಿಪೆಂಡೆಂಟ್ ಆಗಿ ಆಟ ಆಡಿದವ್ರು. ಎಂತಹದ್ದೇ ಕಷ್ಟ ಇದ್ರೂ ಎದೆಗೆ ಎದೆ ಕೊಟ್ಟು ಒಬ್ಬರೇ ಫೇಸ್ ಮಾಡೋ ಚಾಣಾಕ್ಷೆ. ಆಟಕ್ಕೂ ಸೈ ಎಂಟರ್ಟೈನ್ಮೆಂಟ್ಗೂ ಸೈ. ಶೋಭಾಗೆ ಮೈನಸ್ ಅವರ ಕೋಪ. ಯಾರ ಮುಂದೆನೂ ತಲೆಬಾಗಲ್ಲ ಅನ್ನೋ ನೇಚರ್. ನಿರ್ಧಾರಗಳನ್ನ ತಗೋಬೇಕಾದ್ರೇ ಅವಸರ ಜಾಸ್ತಿ. ಇದು ತೆಲುಗು ಬಿಗ್ಬಾಸ್ನಲ್ಲಿ ಅವರ ಆಟ ನೋಡಿದವರ ಅನಿಸಿಕೆ. ಈ ವೈಖರಿ ವರ್ಕ್ ಆಗೋದು ಡೌಟು.
ಶೋಭಾಗೆ ಈಗಾಗಲೇ ಅನುಭವ ಇರೋದ್ರಿಂದ ಬೇಗ ಆಟದ ಹಿಡಿತ ತಗೊಂಡಿದ್ದಾರೆ. ಕನ್ನಡದ ಫಯರ್ ಲೇಡಿ ಅಂತ ಒಂದೇ ದಿನಕ್ಕೆ ಹೆಸರು ಪಡೆದಿರೋದು ಇವರ ಹೆಗ್ಗಳಿಕೆ. ಇನ್ನೂ ಮುಂದಿನ ದಿನಗಳಲ್ಲಿ ಇವರ ಆಟ ಎಷ್ಟರ ಮಟ್ಟಿಗೆ ಮಜಾ ಕೊಡುತ್ತೆ ಅಂತ ಕಾದು ನೋಡಬೇಕಿದೆ.