ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ನಟ ದರ್ಶನ್ ಸದ್ಯ ಜೈಲು ಪಾಲಾಗಿದ್ದಾರೆ. ವಕೀಲರ ಭೇಟಿ ವೇಳೆ ಮಾದ್ಯಮದವರನ್ನು ಕಂಡು ಮಿಡಲ್ ಫಿಂಗರ್ ತೋರಿಸಿ ದುರ್ವತನೆ ತೋರಿದ್ದಾರೆ. ಕೊಲೆ ಆರೋಪದ ಮೇಲೆ ನಟ ದರ್ಶನ್ ಜೈಲು ಸೇರಿದ್ದಾರೆ. ಆದರೆ ಜೈಲು ಸೇರಿದ ಬಳಿಕ ದರ್ಶನ್ ಯಾಕೋ ಸೊರಗಿದ್ದಾರೆ ಅಂತ ಹೇಳ್ತಿದ್ದಾರೆ. ಆದ್ರೆ ನಟ ದರ್ಶನ್ ಜೈಲು ಸೇರಿದಾಗಿನಿಂದಲೂ ಈ ಮಾತ್ರೆಯನ್ನು ತೆಗೆದುಕೊಳ್ತಿದ್ದಾರೆ.
ಹೌದು, ದರ್ಶನ್ ಹೊರಗಡೆ ಇದ್ದಾಗ ಪ್ರತಿದಿನ ವರ್ಕೌಟ್ ಮಾಡ್ತಿದ್ರು, ಪ್ರೋಟೀನ್ ಫುಡ್ ತಿಂತಾ ಇದ್ದರು. ಪ್ರತಿದಿನ ಚಿಕನ್ ತಿನ್ನುತ್ತೇನೆ ಅಂತ ಸ್ವತಃ ಅವರೇ ಹೇಳಿಕೊಂಡಿದ್ದರು. ಆದ್ರೆ ಜೈಲಿನ ಊಟ ಸೇರದೇ ನಟ ದರ್ಶನ್ ಕೊಂಚ ತೂಕ ಕಳೆದುಕೊಂಡಿದ್ದಾರೆ. ಸಣ್ಣ ಆಗಿದ್ದಾರೆ ಅನ್ನೋದನ್ನು ಅವರ ಫೋಟೋ ವಿಡಿಯೋ ನೋಡಿಯೇ ತಿಳಿದುಕೊಳ್ಳಬಹುದು. ಇನ್ನೂ ಬಳ್ಳಾರಿ ಜೈಲಿನಲ್ಲಿರೋ ನಟ ದರ್ಶನ್‌ಗೆ ಅವರ ಹೆಂಡ್ತಿ ಡ್ರೈ ಫ್ರೂಟ್ಸ್‌ಗಳ ಜೊತೆ ಈ ಒಂದು ಮಾತ್ರೆಯನ್ನು ತೆಗೆದುಕೊಂಡು ಹೋಗಿ ನೀಡಿದ್ದಾರೆ. ಪ್ರತಿದಿನ ನಟ ದರ್ಶನ್ ಈ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಜೈಲಿನಲ್ಲಿ ಸರಿಯಾದ ಪೋಷ್ಟಿಕಾಂಶದ ಊಟ ಸಿಗದ ಹಿನ್ನಲೆ ನಟ ದರ್ಶನ್‌ಗೆ ವಿಟಮಿನ್ಸ್ ಟ್ಯಾಬ್ಲೆಟ್ ನೀಡಲಾಗ್ತಿದೆ. ದೇಹಕ್ಕೆ ಎಷ್ಟು ವಿಟಮಿನ್ಸ್ ಬೇಕೋ ಅಷ್ಟು ಈ ಟ್ಯಾಬ್ಲೆಟ್‌ನಲ್ಲಿದೆ ಅಂತ ಹೇಳಲಾಗುತ್ತೆ. ಹೀಗಾಗಿ ನಟ ದರ್ಶನ್ ಪ್ರತಿದಿನ ಈ ಒಂದು ಮಾತ್ರೆಯನ್ನು ತೆಗೆದುಕೊಳ್ಳುತ್ತಿದ್ದಾರಂತೆ. ಈ ವಿಟಮಿನ್ಸ್ ಟ್ಯಾಬ್ಲೆಟ್ ದರ್ಶನ್‌ಗೆ ತಮ್ಮ ಮಸಲ್ ಕಾಪಾಡಿಕೊಳ್ಳಲು ಸಹಾಯ ಮಾಡುತ್ತೆ ಅಂತ ಕೆಲವರು ಹೇಳುತ್ತಿದ್ದಾರೆ.