ಜೈಲಿನಲ್ಲಿ ಸೊರಗಿ ರೇಣುಕಾಸ್ವಾಮಿಯಂತೆ ಕಾಣುತ್ತಿರುವ ದರ್ಶನ್!

public wpadmin

ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಜೈಲು ಸೇರಿರುವ ನಟ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲು ತಲುಪಿದ ಕೆಲ ದಿನಗಳಲ್ಲೇ ಸೊರಗಿ ಹೋಗಿದ್ದಾರೆ. ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ರಾಜಾತಿಥ್ಯ ಪಡೆದ ದರ್ಶನ್​, ಬಳ್ಳಾರಿ ಜೈಲೂಟಕ್ಕೆ ಸೊರಗಿ ಹೋಗಿದ್ದಾರೆ. ಚಾರ್ಜ್​ಶೀಟ್ ಸಲ್ಲಿಕೆಯಾದ ಬಳಿ ನಟ ದರ್ಶನ್ ಚಿಂತೆಯಲ್ಲೇ ಮುಳುಗಿ ಹೋಗಿದ್ದಾರೆ ಎನ್ನಲಾಗ್ತಿದೆ. ಜೈಲಿನಲ್ಲಿ ಒಬ್ಬಂಟಿಯಾದ ದರ್ಶನ್​, ಊಟ, ನಿದ್ದೆ ಸರಿ ಇಲ್ಲದೆ ಸೊರಗಿದ್ದಾರೆ ಎನ್ನಲಾಗ್ತಿದೆ.

ಹೊಟ್ಟೆ ಕರಗಿದ್ದು, ಮುಖ ಕೂಡ ಬಾಡಿದೆ. ಥೇಟ್ ರೇಣುಕಾಸ್ವಾಮಿಯಂತೆ ನಟ ದರ್ಶನ್ ಕಾಣ್ತಿದ್ದಾರೆ. ಪತ್ನಿ ಜೊತೆ ಮಾತಾಡಲು ಸೆಲ್​​ನಿಂದ ಹೊರಗೆ ಬಂದ ದರ್ಶನ್​ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ನಟ ದರ್ಶನ್ ವೈಟ್ ಟೀ ಶರ್ಟ್​ ಹಾಗೂ ಜೀನ್ಸ್ ಧರಿಸಿದ್ದು, ಸಿಕ್ಕಾಪಟ್ಟೆ ಸಣ್ಣ ಆಗಿ ರೇಣುಕಾಸ್ವಾಮಿಯಂತೆ ಕಾಣ್ತಿದ್ದಾರೆ. ಕೊಲೆ ಆರೋಪಿಯಾಗಿ ಬಳ್ಳಾರಿ ಜೈಲು ಸೇರಿದ ದರ್ಶನ್ ಅವರನ್ನು ಕುಟುಂಬಸ್ಥರು ಭೇಟಿ ಮಾಡಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಚಾರ್ಜ್​​ಶೀಟ್ ಸಲ್ಲಿಕೆ ಆದ ಬಳಿಕ 2ನೇ ಬಾರಿಗೆ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಮತ್ತು ತಮ್ಮ ದಿನಕರ್ ಭೇಟಿ ಮಾಡಿದ್ದಾರೆ. ಜೈಲು ಸಂದರ್ಶಕರ ಕೊಠಡಿಯಲ್ಲಿ 25 ನಿಮಿಷಗಳ ಕಾಲ ಮಾತನಾಡಿದ್ದಾರೆ.

ಕಳೆದ 15 ದಿನದಿಂದ ಬಳ್ಳಾರಿ ಜೈಲಿನಲ್ಲಿರುವ ದರ್ಶನ್  ಸಣ್ಣ ಆಗಿದ್ದಾರೆ. ಗಡ್ಡ ಬಿಟ್ಟಿದ್ದು, ಸೊರಗಿದಂತೆ ಕಂಡಿದ್ದಾರೆ.. ಆದರೆ ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್ ಅವರನ್ನು ಭೇಟಿಯಾದ ಬಳಿಕ ದರ್ಶನ್  ಮುಖದಲ್ಲಿ ಕೊಂಚ ಸಮಾಧಾನ ತಂದಂತಿದೆ. ಆದ್ರೆ ಅಮ್ಮ ಬರಲಿಲ್ಲ ಎನ್ನುವ ಬೇಸರವನ್ನು ದರ್ಶನ್ ಹೊರ ಹಾಕಿದ್ದಾರೆ ಎನ್ನಲಾಗ್ತಿದೆ.

ದರ್ಶನ್ ಅವರು ಬಳ್ಳಾರಿ ಜೈಲಿಗೆ ಹೋಗಿ ಇಂದಿಗೆ 15 ದಿನ ಕಳೆದಿದೆ. ಈ 15 ದಿನಗಳಲ್ಲಿ ಪತ್ನಿ ವಿಜಯಲಕ್ಷ್ಮಿ ಅವರು 3ನೇ ಬಾರಿ ಭೇಟಿಯಾಗಿದ್ದಾರೆ. ಇಂದು ಸೆಲ್‌ನಿಂದ ಬಂದ ದರ್ಶನ್ ಅವರು ಎರಡು ಬ್ಯಾಗ್ ಹಿಡಿದು ಬಂದರು. ಕಳೆದ ವಾರ ಪತ್ನಿ ನೀಡಿದ್ದ ಎರಡು ಬ್ಯಾಗ್ ತಂದ ದರ್ಶನ್ ಅವರು ಮತ್ತೊಂದು ಬ್ಯಾಗ್ ಹಿಡಿದು ವಾಪಸ್ ಜೈಲಿನ ಸೆಲ್​ಗೆ ಹೋಗಿದ್ದಾರೆ. ಲಾಯರ್​ ಜೊತೆಗೆ ದರ್ಶನ್​ ಮಾತುಕಥೆ ನಡೆಸಿದ್ದಾರೆ. ಮುಂದಿನ ಕಾನೂನು ಪ್ರಕ್ರಿಯೆಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಜಾಮೀನ ಬಗ್ಗೆ ಕೂಡ ಮಾತುಕತೆ ನಡೆದಿದೆ ಎನ್ನಲಾಗ್ತಿದೆ.

Share This Article
Leave a comment