ಬೈರುತ್: ಲೆಬನಾನ್‌ನ ಮೇಲೆ ಇಸ್ರೇಲ್‌ನ ದಾಳಿಯ ಮಧ್ಯೆ ಹಿಜ್ಬುಲ್ಲಾದ ಎರಡನೇ-ಕಮಾಂಡ್ ಮತ್ತು ಡೆಪ್ಯೂಟಿ ಸೆಕ್ರೆಟರಿ ಜನರಲ್ ನಯಿಮ್ ಕಾಸ್ಸೆಮ್ ಲೆಬನಾನ್‌ನಿಂದ ಇರಾನ್‌ಗೆ ಪಲಾಯನ ಮಾಡಿದ್ದಾನೆ.
ಹಮಾಸ್, ಹಿಜ್ಬುಲ್ಲಾ ಮತ್ತು ಇತರ ಇರಾನ್ ಪೋಷಿತ ಉಗ್ರ ಸಂಘಟನೆಗಳನ್ನು ನಾಶಮಾಡುವ ಹೊರಟಿರುವ ಇಸ್ರೇಲ್ ದೇಶವು ಎರಡೂ ಗುಂಪುಗಳ ಹಲವಾರು ಪ್ರಮುಖ ನಾಯಕರನ್ನು ಹತ್ಯೆ ಮಾಡಿದೆ. ಇದರಲ್ಲಿ ಬದುಕುಳಿದರುವ ಹಿಜ್ಬುಲ್ಲಾ ಸಂಘಟನೆಯ ಕೆಲವು ನಾಯಕರಲ್ಲಿ ಹಿಜ್ಬುಲ್ಲಾದ ಎರಡನೇ ಕಮಾಂಡರ್ ಆಗಿದ್ದ ಡೆಪ್ಯೂಟಿ ಸೆಕ್ರೆಟರಿ ಜನರಲ್ ನಯಿಮ್ ಕಾಸ್ಸೆಮ್ ಕೂಡ ಒಬ್ಬ. ಈತ ಭಯದಿಂದ ಇರಾನ್‌ಗೆ ಪಲಾಯನ ಮಾಡಿದ್ದಾನೆ ಎನ್ನಲಾಗಿದೆ.
ಇಸ್ರೇಲ್ ಹಿಜ್ಬುಲ್ಲಾ ಉಗ್ರ ಸಂಘಟನೆಯ ವಿರುದ್ಧ ತನ್ನ ಸೇನಾ ಕಾರ್ಯಾಚರಣೆಯನ್ನು ತೀವ್ರಗೊಳಿಸುತ್ತಿದೆ. ಈಗಾಗಲೇ ಹಮಾಸ್ ಮುಖ್ಯಸ್ಥ ಮುಖ್ಯಸ್ಥ ಹಸನ್ ನಡ್ರೆಲ್ಲಾ ಸೇರಿದಂತೆ ಸಂಘಟನೆಯೊಳಗಿನ ಹಲವಾರು ಪ್ರಮುಖ ನಾಯಕರು ಸಾವನ್ನಪ್ಪಿದ್ದಾರೆ. ಯುದ್ಧ ಪೀಡಿತ ಲೆಬನಾನ್ ಮತ್ತು ಸಿರಿಯಾ ದೇಶಗಳಿಗೆ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘಿ ಭೇಟಿ ನೀಡಿದ ವೇಳೆಯೇ ನಯಿಮ್ ಕಾಸ್ಸೆಮ್ ಸಚಿವರೊಡನೆ ಅಕ್ಟೋಬರ್ 5 ರಂದು ಲೆಬನಾನ್‌ನ ಬೈರುತ್‌ನಿಂದ ಹೊರಟು ಇರಾನಿನ ಟೆಹ್ರಾನ್‌ಗೆ ತಲುಪಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಜೀವಭಯದಿಂದ ಹಿಜ್ಬುಲ್ಲಾ ಲೀಡರ್ ಇರಾನ್‌ಗೆ ಪಲಾಯನ
Leave a comment
Leave a comment