ಜೀವನವಿಡೀ ಜೊತೆಗೆ ಬದುಕುವ ಸಂಗಾತಿ ಬೇಕಿದ್ರೆ ಜಸ್ಟ್ ಇಷ್ಟು ಮಾಡಿ ಸಾಕು!

public wpadmin

ನಾವೆಲ್ಲರೂ ಜೀವನದಲ್ಲಿ ಉತ್ತಮ ಸಂಬಂಧಗಳನ್ನು ನಿರ್ವಹಿಸಬೇಕೆಂದು ಬಯಸುತ್ತೇವೆ. ಆದರೆ ನಾನಾ ಕಾರಣಗಳಿಂದ ಕೆಲವೊಮ್ಮೆ ಸಂಬಂಧಗಳ ನಿರ್ವಹಣೆ ಕಷ್ಟಾಸಾಧ್ಯವಾಗುತ್ತದೆ. ದಂಪತಿಗಳ, ಸಂಗಾತಿಗಳ ನಡುವಿನ ಘರ್ಷಣೆ, ಒಡಕುಗಳು, ವೈಮನಸ್ಸುಗಳು, ತಪ್ಪು ತಿಳುವಳಿಕೆಗಳು ಸುಂದರ ಸಂಬಂಧವನ್ನೇ ಹಾಳು ಮಾಡುತ್ತದೆ. ದಾಂಪತ್ಯ ಇಲ್ಲವೇ ಸಂಬಂಧದ ಪ್ರೀತಿಯನ್ನು ದೀರ್ಘಕಾಲ ಕೊಂಡೊಯ್ಯಬೇಕು ಎಂಬುದು ನಿಮ್ಮ ಬಯಕೆಯಾಗಿದ್ದರೆ ನೀವು ಜೀವನದಲ್ಲಿ ಕೆಲವೊಂದು ಬದಲಾವಣೆಗಳನ್ನು, ಮಾರ್ಪಾಡುಗಳನ್ನು ತರಲೇಬೇಕು .

ಸಂಗಾತಿಗಳ ಆಸಕ್ತಿಗಳನ್ನು ಗೌರವಿಸುವುದು

ಸಂಗಾತಿಗಳ ಪರಸ್ಪರರ ಹಿತಾಸಕ್ತಿಗೆ ಗಮನ ನೀಡುವುದು ಸಂಬಂಧವನ್ನು ದೀರ್ಘಾವಧಿಯವರೆಗೆ ಕೊಂಡೊಯ್ಯುವಲ್ಲಿ ಸಹಕಾರಿಯಾಗಿದೆ. ಇಬ್ಬರೂ ಪರಸ್ಪರರ ಬೇಕು ಬೇಡಗಳತ್ತ ಗಮನ ಹರಿಸಬೇಕು ಅವರ ಮನದ ಆಸೆ ಏನು ಎಂಬುದನ್ನು ತಿಳಿದುಕೊಂಡು ಅದನ್ನು ಮುಂದುವರಿಸಲು ಅವರಿಗೆ ಬೆಂಬಲ ಹಾಗೂ ನೆರವನ್ನು ನೀಡಬೇಕು. ದಂಪತಿಗಳು ಪರಸ್ಪರರ ವೈಯಕ್ತಿಕ ಬೆಳವಣಿಗೆಯನ್ನು ಪೋಷಿಸಬೇಕು ಇದು ಸಂತೋಷಕ್ಕೆ ಕಾರಣವಾಗುತ್ತದೆ. ಇಬ್ಬರೂ ಬದ್ಧತೆಯಿಂದ ವ್ಯವಹರಿಸಬೇಕು ಇದು ಸುಸ್ಥಿರ ಪ್ರೀತಿಗೆ ಮೂಲಾಧಾರವಾಗಿದೆ.

ಸಂಗಾತಿಯನ್ನು ವಿಶೇಷವಾಗಿ ಉಪಚರಿಸುವುದು ಅವರಿಗೆ ನಿಮ್ಮ ಮೇಲಿರುವ ಗೌರವವನ್ನು ಹೆಚ್ಚಿಸುತ್ತದೆ. ಅನ್ಯೋನ್ಯತೆ, ಲೈಂಗಿಕತೆ, ಬದ್ಧತೆ, ಅವರ ಯೋಗಕ್ಷೇಮದ ಕಾಳಜಿ ಹೀಗೆ ಅವರಿಗೆ ನೀಡುವ ಪ್ರಾಧಾನ್ಯತೆಯನ್ನು ಅವರಿಗೆ ಮೀಸಲಿರಿಸಿ ಇದರಿಂದ ಅವರಿಗೆ ನಿಮ್ಮ ಮೇಲಿರುವ ಪ್ರೀತಿ ದುಪ್ಪಟ್ಟಾಗುವುದು ಖಚಿತ.

ನಿಮ್ಮ ಬದ್ಧತೆಯನ್ನು ಅರ್ಥಮಾಡಿಕೊಳ್ಳಲು ಅವರಿಗೆ ನಿಮ್ಮಲ್ಲಿರುವ ವಿಶೇಷ ಗೌರವವನ್ನು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ. ಪದಗಳು, ಕ್ರಿಯೆಗಳು ಅಥವಾ ಎರಡರ ಮೂಲಕ ನಿಮ್ಮ ಪಾಲುದಾರರೊಂದಿಗೆ ನೀವು ಹಂಚಿಕೊಳ್ಳುವ ನಿಕಟ ಸಂಪರ್ಕವನ್ನು ರಕ್ಷಿಸುವ ಮೂಲಕ ಸಂಬಂಧದ ಪಾವಿತ್ರತೆಯನ್ನು ಬಲಪಡಿಸಿ.

ಅನ್ಯೋನ್ಯತೆಯನ್ನು ಶಾಶ್ವತ ಪ್ರೀತಿಯ ಮೂರನೇ ಮೂಲಾಧಾರವೆಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ನಿಜವಾದ ಅನ್ಯೋನ್ಯತೆಯನ್ನು ಹೀಗೆಯೇ ಇಂತಹುದ್ದೇ ಎಂಬುದಾಗಿ ಹೇಳುವುದು ಅಸಾಧ್ಯವಾಗಿದೆ. ಅನ್ಯೋನ್ಯತೆಯು ಕೇವಲ ಪರಿಚಿತತೆ ಮತ್ತು ಬಾಂಧವ್ಯ ಅಥವಾ ನಿಕಟತೆಯ ಸಾಮಾನ್ಯ ಅರ್ಥಕ್ಕಿಂತ ಹೆಚ್ಚು. ಇದು ಯಾವಾಗ ಸಾಧ್ಯವೆಂದರೆ ನಾವು ನಮ್ಮ ಪಾಲುದಾರರಿಗೆ ನಮ್ಮ ಅಂತರಂಗವನ್ನು ತೆರೆದಾಗ ಮಾತ್ರ ಸಾಧಿಸಬಹುದಾದ ಸಂಗತಿಯಾಗಿದೆ.

ನಿಜವಾದ ಅನ್ಯೋನ್ಯತೆ ಎಂಬುದು ಸಂಗಾತಿಗಳು ಒಬ್ಬರಿಗೆ ಒಬ್ಬರು ನೀಡುವ ಪ್ರತ್ಯೇಕ ಸ್ಥಾನವಾಗಿದೆ. ತಮ್ಮ ಮುಖ್ಯ ಹಾಗೂ ವಿಶ್ವಾಸಾರ್ಹ ಪಾಲುದಾರರಾಗಿ ಪ್ರಮುಖ ಸ್ಥಾನವನ್ನು ನೀಡುವುದು ಅವರಿಗೆ ಸಂಗಾತಿಯ ಮೇಲಿರುವ ಪ್ರೀತಿಯನ್ನು ಹೆಚ್ಚಿಸುತ್ತದೆ. ತನ್ನ ಭರವಸೆಗಳು, ಕನಸುಗಳು, ವಿಜಯಗಳು, ವೈಫಲ್ಯಗಳು, ಕಾಳಜಿಗಳು, ಅಭದ್ರತೆಗಳು, ನೋವುಗಳು ಮತ್ತು ನಿಜವಾದ ವೈಯಕ್ತಿಕ ವಿಷಯಗಳ ಬಗ್ಗೆ ಸಂಗಾತಿಯಲ್ಲಿ ಭರವಸೆಯನ್ನಿರಿಸುವುದು ಕೂಡ ಸಂಬಂಧದಲ್ಲಿ ಆತ್ಮೀಯತೆಯನ್ನುಂಟು ಮಾಡುತ್ತದೆ. ಸಂಬಂಧದಲ್ಲಿ ಆತ್ಮೀಯತೆ ಹಾಗೂ ಆಪ್ತತೆಯನ್ನು ಸಾಧಿಸಲು ಪರಸ್ಪರರು ನಂಬಿಕೆ, ವಿಶ್ವಾಸವನ್ನಿರಿಸುವುದು ಮುಖ್ಯವಾಗಿದೆ. ಇದರಿಂದ ನಿಮ್ಮ ಪಾಲುದಾರರು ನಿಮ್ಮನ್ನು ಸಂಪೂರ್ಣವಾಗಿ-ದೋಷಗಳು ಮತ್ತು ಎಲ್ಲವನ್ನೂ ನೋಡಲು ಅವಕಾಶ ನೀಡುತ್ತೀರಿ.

ಇಬ್ಬರೂ ಪಾಲುದಾರರು ತಮ್ಮ ಆಳವಾದ ಭಯಗಳು, ಆಸೆಗಳು ಮತ್ತು ಅಭದ್ರತೆಗಳನ್ನು ಹಂಚಿಕೊಳ್ಳಲು ಸಾಕಷ್ಟು ಸುರಕ್ಷಿತವೆಂದು ಭಾವಿಸಿದಾಗ, ಅವರೂ ಸಹ ಅಚಲವಾದ ಏಕತೆಯ ಅರ್ಥವನ್ನು ಹಂಚಿಕೊಳ್ಳುತ್ತಾರೆ. ನಿಮ್ಮ ಸಂಗಾತಿ ಹಾಗಿರಬೇಕು, ಹೀಗಿರಬೇಕೆಂದು ಒತ್ತಡ ಹೇರದೇ ಅವರು ಹೇಗಿದ್ದಾರೋ ಹಾಗೆಯೇ ಅವರನ್ನು ಸ್ವೀಕರಿಸುವುದು ಅವರಿಗೆ ಪೂರ್ಣ ಸ್ವಾತಂತ್ರ್ಯದ ಖುಷಿಯನ್ನು ಆಸ್ವಾದಿಸಲು ಸಹಕಾರವನ್ನುಂಟು ಮಾಡುತ್ತದೆ. ಸಂಗಾತಿಯ ಮೇಲಿನ ಹೆಚ್ಚಿನ ಅಧಿಕಾರ ಚಲಾಯಿಸದೆ ಅವರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಸಂಬಂಧದಲ್ಲಿ ದೀರ್ಘ ಪ್ರೀತಿ, ಆತ್ಮೀಯತೆಯನ್ನು ಸಾಧಿಸಲು ಸಹಕಾರಿಯಾಗಿದೆ.

Share This Article
Leave a comment