ರಾಯ್ಪುರ: ಛತ್ತೀಸ್‌ಗಢದಲ್ಲಿ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ರೌಡಿ ಶೀಟರ್‌ನನ್ನು ದುರ್ಗ ಜಿಲ್ಲೆಯ ಭಿಲಾಯಿ ನಗರದಲ್ಲಿ ಪೊಲೀಸರು ಎನ್‌ಕೌಂಟರ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಸುಮಾರು 20 ವರ್ಷಗಳಲ್ಲಿ ರಾಜ್ಯದ ನಗರ ಪ್ರದೇಶದಲ್ಲಿ ಇದೇ ಮೊದಲ ಎನ್‌ಕೌಂಟರ್ ಆಗಿದೆ. ಕೊಲೆ, ಕೊಲೆ ಯತ್ನ ಮತ್ತು ಲೂಟಿ ಪ್ರಕರಣಗಳಲ್ಲಿ ಬೇಕಾಗಿದ್ದ ದರೋಡೆಕೋರ ಅಮಿತ್ ಜೋಶ್, ಪೊಲೀಸರೊಂದಿಗೆ ಗುಂಡಿನ ಚಕಮಕಿಯಲ್ಲಿ ಹೋರಾಡಿ ಮೃತಪಟ್ಟಿದ್ದಾನೆ. ಜೂನ್ 25 ರ ರಾತ್ರಿ ಜೋಶ್ ಮತ್ತು ಅವನ ಗ್ಯಾಂಗ್ ಪಾರ್ಕಿಂಗ್ ವಿವಾದದ ವಿಚಾರಕ್ಕೆ ನಾಗರಿಕರೊಂದಿಗೆ ಜಗಳವಾಡಿತ್ತು. ಗ್ಯಾಂಗ್‌ನಿಂದ ಮೂವರ ಮೇಲೆ ಗುಂಡು ಹಾರಿಸಲಾಗಿತ್ತು. 2005 ರಲ್ಲಿ ಭಿಲಾಯ್‌ನಲ್ಲಿ ಎನ್‌ಕೌಂಟರ್‌ವೊಂದು ನಡೆದಿತ್ತು. ಕೊಲೆ ಆರೋಪಿ ಗೋವಿಂದ್ ವಿಶ್ವಕರ್ಮನನ್ನು ತಾಲ್ಪುರಿ ಪ್ರದೇಶದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು.
ಛತ್ತೀಸಗಢದಲ್ಲಿ ಪೊಲೀಸ್ ಎನೌಕೌಂಟರ್‌ಗೆ ಗ್ಯಾಂಗ್‌ಸ್ಟರ್ ಬಲಿ
Leave a comment
Leave a comment