ಚೀನಾದಲ್ಲಿ ಕಾರು ಚಾಲಕನ ಹುಚ್ಚಾಟಕ್ಕೆ 35 ಬಲಿ, 43 ಮಂದಿಗೆ ಗಾಯ

public wpadmin

– ಸಾಮಾಜಿಕ ಜಾಲತಾಣದಲ್ಲಿ ಹುಡುಕಾಟಕ್ಕೆ ಸೆನ್ಸಾರ್
ಬೀಜಿಂಗ್‌: ವ್ಯಾಯಾಮ ಮಾಡುತ್ತಿರುವವರ ಮೇಲೆ ಕಾರು ನುಗ್ಗಿದ ಪರಿಣಾಮ 35 ಮಂದಿ ಬಲಿಯಾಗಿ 43 ಜನರು ಗಾಯಗೊಂಡ ಘಟನೆ ಚೀನಾದಲ್ಲಿ ನಡೆದಿದೆ.

ಸೋಮವಾರ ದಕ್ಷಿಣ ಚೀನಾದ ಝುಹೈ ನಗರದ ಕ್ರೀಡಾ ಕೇಂದ್ರದಲ್ಲಿ ವ್ಯಾಯಾಮ ಮಾಡುತ್ತಿದ್ದ ಜನರ ಮೇಲೆ 62 ವರ್ಷದ ಚಾಲಕ ಕಾರು ನುಗ್ಗಿಸಿದ್ದಾನೆ.


ಪೊಲೀಸರು ಕಾರು ಚಾಲಕನನ್ನು ಬಂಧಿಸಿದ್ದಾರೆ. ಕೃತ್ಯದ ಬಳಿಕ ಚಾಲಕ ಚಾಕು ಬಳಸಿ ತನ್ನ ಹತ್ಯೆಗೆ ಮುಂದಾಗಿದ್ದ ಎಂದು ವರದಿಯಾಗಿದೆ.

ಚೈನೀಸ್ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಆಯೋಜಿಸಿದ್ದ ಝುಹೈ ಏರ್‌ಶೋ ಒಂದು ದಿನ ಮೊದಲು ಈ ಘಟನೆ ನಡೆದಿದೆ. ಇದು ಅಪಘಾತವೇ ಅಥವಾ ಪೂರ್ವ ನಿಯೋಜಿತ ಉಗ್ರರ ಕೃತ್ಯವೇ ಎಂಬ ನಿಟ್ಟಿನಲ್ಲಿ ಈಗ ತನಿಖೆ ಆರಂಭವಾಗಿದೆ.
ಮಂಗಳವಾರ ಬೆಳಗ್ಗೆ ಚೀನೀ ಸಾಮಾಜಿಕ ಮಾಧ್ಯಮದಲ್ಲಿ ಘಟನೆಯ ಹುಡುಕಾಟಗಳ ಬಗ್ಗೆ ಚೀನಾ ಸೆನ್ಸಾರ್‌ ಮಾಡಿದೆ. ಸಾಮಾಜಿಕ ಜಾಲತಾಣ Weibo ನಲ್ಲಿ ಈ ಘಟನೆಯ ಬಗ್ಗೆ ಸರ್ಚ್‌ ಮಾಡಿದರೆ ಕೇವಲ ಒಂದೆರಡು ಚಿತ್ರಗಳು ಮಾತ್ರ ಕಾಣುತ್ತಿದೆ.

ಸೋಮವಾರ ರಾತ್ರಿಯಿಂದಲೇ ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲಾ ಪೋಸ್ಟ್‌ಗಳನ್ನು ತೆಗೆದು ಹಾಕಲಾಗಿದೆ ಎಂದು ವರದಿಯಾಗಿದೆ. ಈ ಘಟನೆಯ ನಂತರ ಮುಂದಿನ ಸೂಚನೆ ಬರುವವರೆಗೆ ವ್ಯಾಯಾಮ ಕೇಂದ್ರವನ್ನು ಬಂದ್‌ ಮಾಡಲಾಗಿದೆ.

Share This Article
Leave a comment