ಚಿಟಿಕೆ ಹೊಡೆದು ಗೋಲ್ಡ್​ ಸುರೇಶ್​ಗೆ ರಜತ್ ಚಾಲೆಂಜ್; ಮತ್ತೆ ಅದೇ ಪದ ಬಳಕೆ..!

public wpadmin

ಬಿಗ್​ಬಾಸ್​ ಮನೆಯಲ್ಲಿ ಕಳಪೆ ಮತ್ತು ಉತ್ತಮ ನೀಡುವ ವಿಚಾರದಲ್ಲಿ ಹೊತ್ತಿ ಉರಿದಿದೆ. ಬಹುತೇಕ ಸ್ಪರ್ಧಿಗಳು ಕಳಪೆಗೆ ರಜತ್ ಕಿಶನ್ ಹೆಸರು ತೆಗೆದುಕೊಂಡಿದ್ದು, ಜೈಲು ಸೇರಿದ್ದಾರೆ.

ಇಂದು ರಾತ್ರಿ ಪ್ರಸಾರವಾಗುವ ಎಪಿಸೊಡ್​ನ ಪ್ರೊಮೋ ಒಂದನ್ನು ಬಿಗ್​ಬಾಸ್ ಶೇರ್ ಮಾಡಿದ್ದಾರೆ. ಅದರಲ್ಲಿ ಮೋಕ್ಷಿತಾ, ಹನುಮಂತ, ಗೋಲ್ಡ್ ಸುರೇಶ್, ಶೋಭಾ ಶೆಟ್ಟಿ, ಐಶ್ವರ್ಯ, ಶಿಶೀರ್​ ಸೇರಿದಂತೆ ಹಲವರು ಕಳಪೆ ರಜತ್ ಎಂದು ಹೇಳಿದ್ದಾರೆ. ಇದರಿಂದ ರಜತ್ ಕೆರಳಿ ಕೆಂಡವಾಗಿದ್ದಾರೆ.

ಕಳಪೆ ನೀಡುವ ವೇಳೆ ರಜತ್ ಬಳಸಿದ ಪದಗಳ ಬಗ್ಗೆ ಗೋಲ್ಡ್ ಸುರೇಶ್ ಪ್ರಶ್ನೆ ಮಾಡಿದ್ದಾರೆ. ವೇದಿಕೆಗೆ ಬರುವ ರಜತ್, ಮತ್ತೆ ಗೋಲ್ಡ್ ಸುರೇಶ್ ಅವರತ್ತ ಬೆರಳು ತೋರಿಸಿ.. ಇಂತವರನ್ನೆಲ್ಲ ಮನೆಗೆ ಕಳುಹಿಸಿಯೇ ನಾನು ಹೋಗೋದು ಎಂದು ಚಾಲೇಂಜ್ ಮಾಡಿದ್ದಾರೆ. ನಾನು ಹುಟ್ಟಿದಾಗಿಂದ ಹೀಗೇ ಇದ್ದೀನಿ, ಇವಾಗಲೂ ಹೀಗೆ ಇದ್ದೀನಿ. ಇನ್ಮುಂದೆ ಇದಕ್ಕಿಂತ ತ್ರಿಬಲ್ ಮಾತಾಡ್ತೀನಿ. ತೋರಿಸ್ತೀನಿ. ಇನ್ಮುಂದೆ ನಿಜವಾದ ಆಟ ಶುರು ಎಂದು ಚಿಟಿಕೆ ಹೊಡೆದಿದ್ದಾರೆ.

ಅಂದ್ಹಾಗೆ ರಜತ್ ಕಳೆವಾರವಷ್ಟೇ ವೈಲ್ಡ್​ ಕಾರ್ಡ್ ಮೂಲಕ ಬಿಗ್​ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ. ಬರ್ತಿದ್ದಂತೆಯೇ ಕೆಲವು ಸ್ಪರ್ಧಿಗಳನ್ನು ನೇರವಾಗಿ ಟಾರ್ಗೆಟ್ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೇ ಅವರು ಬಳಸುತ್ತಿರುವ ಪದಗಳ ಬಗ್ಗೆ ಭಾರೀ ಚರ್ಚೆ ಆಗ್ತಿದೆ. ಸ್ಪರ್ಧಿಗಳಿಗೂ ಅಸಮಾಧಾನ ಇದೆ.

Share This Article
Leave a comment