ಚಿಕನ್ ನೀಡದ್ದಕ್ಕೆ ಹೋಟೆಲ್ ಸಪ್ಲೈಯರ್‌ನನ್ನು ಹತ್ಯೆಗೈದ ಯುವಕರು!

public wpadmin

ಚಂಡೀಗಢ: ಚಿಕನ್‌ ನೀಡಿಲ್ಲ ಎಂದು ಹೋಟೆಲ್‌ನ ಸಪ್ಲೈಯರ್‌ನನ್ನು ಯುವಕರ ಗುಂಪೊಂದು ಹತ್ಯೆಗೈದ ಘಟನೆ ಚಂಡೀಗಢದಲ್ಲಿ ನಡೆದಿದೆ.

ಹತ್ಯೆಗೀಡಾದ ವ್ಯಕ್ತಿಯನ್ನು ಜಸ್ಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಹೋಟೆಲ್‌ನ ಮತ್ತೋರ್ವ ಸಿಬ್ಬಂದಿಗೆ ಗಾಯಗೊಂಡಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ಆಕಾಶ್ ಎಂದು ಗುರುತಿಸಲಾಗಿದೆ. ನಾಲ್ವರು ಯುವಕರು ರಾತ್ರಿ 11 ಗಂಟೆ ಸುಮಾರಿಗೆ ಹೋಟೆಲ್‌ಗೆ ಬಂದಿದ್ದರು. ಈ ವೇಳೆ ಚಿಕನ್ ಬೇಕು ಎಂದು ಕೇಳಿದ್ದು, ಹೋಟೆಲ್‌ ಮುಚ್ಚುವ ಸಮಯವಾಯ್ತು ಎಂದು ಅವರಿಗೆ ಹೋಟೆಲ್‌ ಸಿಬ್ಬಂದಿ ಹೇಳಿದ್ದಾರೆ. ಈ ವೇಳೆ ಗಲಾಟೆ ನಡೆಸಿ ಗುಂಪು ಅಲ್ಲಿಂದ ತೆರಳಿದೆ.

ಸುಮಾರು 45 ನಿಮಿಷಗಳ ನಂತರ ಯುವಕರ ಗುಂಪು, ಕ್ರಿಕೆಟ್ ವಿಕೆಟ್ ಮತ್ತು ಹರಿತವಾದ ಆಯುಧಗಳನ್ನು ತಂದು ಹೋಟೆಲ್‌ನಲ್ಲಿದ್ದ ಜಸ್ಪ್ರೀತ್ ಮತ್ತು ಆಕಾಶ್ ಮೇಲೆ ದಾಳಿ ನಡೆಸಿದ್ದಾರೆ. ಇದರಿಂದ ಇಬ್ಬರೂ ತೀವ್ರ ಗಾಯಗೊಂಡಿದ್ದಾರೆ. ಬಳಿಕ ಆಕಾಶ್ ಹೋಟೆಲ್‌ ಮಾಲೀಕರ ಮಗನಿಗೆ ಕರೆ ಮಾಡಿದ್ದು, ಆತ ಬಂದು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆಸ್ಪತ್ರೆಯಲ್ಲಿ ಜಸ್ಪ್ರೀತ್‌ ಸಾವಿಗೀಡಾಗಿದ್ದಾನೆ ಎಂದು ಪೊಲೀಸರು (Police) ತಿಳಿಸಿದ್ದಾರೆ. ಈ ಸಂಬಂಧ ಅಪ್ರಾಪ್ತ ಬಾಲಕ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಬಂಧಿತರನ್ನು ಸಾಗರ್, ಜೋಗಿಂದರ್, ಗುರ್ಮೀತ್, ವೀರು ಮತ್ತು ರಾಜಿ ಎಂದು ಗುರುತಿಸಲಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

Share This Article
Leave a comment