ಚಾನಲ್‌, ನನ್ನ ನಡುವೆ ಯಾವುದೇ ಘರ್ಷಣೆ ಆಗಿಲ್ಲ: ವದಂತಿಗಳಿಗೆ ಸುದೀಪ್‌ ಸ್ಪಷ್ಟನೆ

public wpadmin

ಬಿಗ್‌ಬಾಸ್‌ ನಿರೂಪಣೆಗೆ ವಿದಾಯ ಹೇಳಿದ್ದ ವಿಚಾರವಾಗಿ ಹಬ್ಬರುವ ವದಂತಿಗಳಿಗೆ ನಟ ಕಿಚ್ಚ ಸುದೀಪ್‌ ಪ್ರತಿಕ್ರಿಯಿಸಿದ್ದಾರೆ. ಚಾನಲ್‌ ಮತ್ತು ನನ್ನ ನಡುವೆ ಯಾವುದೇ ಘರ್ಷಣೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿರುವ ಸುದೀಪ್‌, ನನ್ನ ನಿರ್ಧಾರದ ನಂತರ ನೀವು ತೋರಿಸಿದ ಪ್ರೀತಿ-ಬೆಂಬಲಕ್ಕೆ ಧನ್ಯವಾದ. ಚಾನಲ್ ಹಾಗೂ ನನ್ನ ನಡುವೆ ಯಾವುದೇ ಘರ್ಷಣೆ ಆಗಿಲ್ಲ. ಈ ಬಗ್ಗೆ ಬರ್ತಿರೋ ವೀಡಿಯೋಗಳು, ಪ್ರತಿಕ್ರಿಯೆಗಳೆಲ್ಲಾ ಆಧಾರ ರಹಿತ. ನನಗೆ ಅಗೌರವ ಆಗಿದೆ ಎಂಬ ಪದವನ್ನ ಇದಕ್ಕೆ ಸೇರಿಸೋದು ತಪ್ಪು ಎಂದಿರುವ ನಟ ವದಂತಿಗಳನ್ನು ಹರಡದಂತೆ ಮನವಿ ಮಾಡಿಕೊಂಡಿದ್ದಾರೆ. 

ಈ ಸಮಸ್ಯೆಯ ಸುತ್ತಲಿನ ಯಾವುದೇ ಊಹೆಗಳು ಆಧಾರ ರಹಿತ. ಕಲರ್ಸ್ ಜೊತೆಗೆ ನನ್ನ ಬಾಂಧವ್ಯ ಚೆನ್ನಾಗಿದೆ. ನಮ್ಮ ನಡುವೆ ಏನೂ ಆಗಿಲ್ಲ. ಬಿಗ್‌ಬಾಸ್ ಡೈರೆಕ್ಟರ್ ಪ್ರಕಾಶ್ ಬಹಳ ಟ್ಯಾಲೆಂಟೆಡ್. ಅವರು ಯಾವಾಗಲೂ ನನ್ನ ಗೌರವದಿಂದ ನಡೆಸಿಕೊಳ್ತಾರೆ. ನಾನು ಅವರ ಬಗ್ಗೆ ಆಳವಾದ ಗೌರವ ಹೊಂದಿದ್ದೇನೆ ಎಂದು ಸುದೀಪ್ ತಿಳಿಸಿದ್ದಾರೆ.

Share This Article
Leave a comment