ಚರಂಡಿಯಲ್ಲಿ ಬಿದ್ದು ಎರಡು ವರ್ಷದ ಮಗು ಸಾವು – ಪಾಲಿಕೆಯ ವಿರುದ್ಧ ಕುಟುಂಬಸ್ಥರ ಆಕ್ರೋಶ

public wpadmin

ವಿಜಯಪುರ: ಚರಂಡಿಯಲ್ಲಿ ಬಿದ್ದು ಎರಡು ವರ್ಷದ ಮಗು ಸಾವನ್ನಪ್ಪಿದ್ದ ದಾರುಣ ಘಟನೆ ನಗರದ ಬಡಿಕಮಾನ್ ರಸ್ತೆಯ ಬಳಿ ನಡೆದಿದೆ.

ಮೃತ ಮಗುವನ್ನು 2 ವರ್ಷದ ಯಾಸೀನ್ ಸದ್ದಾಂ ಮುಲ್ಲಾ ಎಂದು ಗುರುತಿಸಲಾಗಿದೆ.

ಕಳೆದ ಕೆಲವು ದಿನಗಳ ಹಿಂದೆ ಭಾರೀ ಮಳೆ ಹಿನ್ನೆಲೆ ಚರಂಡಿ ಮೇಲಿನ ಕಲ್ಲು ತೆಗೆಯಲಾಗಿತ್ತು. ಬಳಿಕ ಮಹಾನಗರ ಪಾಲಿಕೆಯವರು ಚರಂಡಿಯ ಮೇಲ್ಭಾಗವನ್ನು ಮುಚ್ಚಿರಲಿಲ್ಲ. ಇದರಿಂದಾಗಿ ಮಂಗಳವಾರ (ಅ.15) ಸಂಜೆ ಮಗು ಚರಂಡಿಗೆ ಬಿದ್ದು ಸಾವನ್ನಪ್ಪಿದೆ. ಅವಘಡಕ್ಕೆ ಮಹಾನಗರ ಪಾಲಿಕೆಯ ನಿರ್ಲಕ್ಷ್ಯವೇ ಕಾರಣ ಎಂದು ಮಗುವಿನ ಕುಟುಂಬಸ್ಥರು ಆರೋಪಿಸಿದ್ದಾರೆ.


Share This Article
Leave a comment