ಗೊರಕೆ ಹೊಡೆಯುವ ಅಭ್ಯಾಸ ನಿಮಗೂ ಇದೆನಾ?.. ಹೌದು, ಗೊರಕೆಗೆ ಸಂಬಂಧ ಪಟ್ಟಂತೆ ಸಾಮಾಜಿಕ ಜಾಲತಾಣದಲ್ಲಿ ಮೌತ್ ಟೇಪಿಂಗ್ ಎನ್ನುವ ಪದ ಹಾಗೂ ಇದರ ಉಪಯೋಗದ ಬಗ್ಗೆ ಸಾಕಷ್ಟು ಕೇಳಿ ಬರುತ್ತಿದೆ.
ಇನ್ನು, ರಾತ್ರಿ ಮಲಗುವಾಗ ಬಾಯಿಗೆ ಟೇಪ್ ಹಾಕಿಕೊಂಡು ಮಲಗುವುದರಿಂದ ಗೊರಕೆ ಕಮ್ಮಿಯಾಗುತ್ತಂತೆ. ಇದರಿಂದ ನಾವು ಬಾಯಿಂದ ಉಸಿರಾಡಲು ಆಗುವುದಿಲ್ಲ. ಮೂಗಿನಿಂದಲೇ ಉಸಿರಾಡಬೇಕಾಗುತ್ತದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಮೌತ್ ಟೇಪಿಂಗ್‌ಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ವೈದ್ಯರು ಹೇಳುತ್ತಾರೆ.
ಈ ಬಗ್ಗೆ ಮಾತನಾಡಿದ ನಿದ್ರಾ ತಜ್ಞ ಡಾ ಮಂಜುನಾಥ್ ಎಚ್. ಕೆ., ಇದೊಂದು ನಿಷ್ಪಲ ಪ್ರಯೋಗ . ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯದಲ್ಲಿ ಸಮಸ್ಯೆಯು ಗಂಟಲಕುಳಿಯಲ್ಲಿದೆ. ಮೌತ್ ಟೇಪಿಂಗ್‌ನಿಂದ ನಿಮಗೆ ಕೆಲವು ಬಾರಿ ಚೆನ್ನಾಗಿ ನಿದ್ದೆ ಬರಬಹುದು, ಆದರೆ ಇದು ಖಂಡಿತ ಮೂಲ ಸಮಸ್ಯೆ ಪರಿಹಾರ ನೀಡುವುದಿಲ್ಲ. ಮೂಗಿನ ಮೂಲಕ ಉಸಿರಾಡುವುದು ನೈಸರ್ಗಿಕ ಹಾಗೂ ಶಾರೀರಿಕ ಪ್ರಕ್ರಿಯೆಯಾಗಿದೆ. ಆದರೆ ವಾಯುಮಾರ್ಗ ಅಥವಾ ಶ್ವಾಸನಾಳದಲ್ಲಿ ತೊಂದರೆಗಳಿದ್ದರೆ ಜನರು ಬಾಯಿಯಿಂದ ಅಲ್ಲದೇ ಆಗಾಗ ಬಾಯಿಗೆ ಟೇಪ್ ಧರಿಸುವುದರಿಂದ ಚರ್ಮದ ಕಿರಿಕಿರಿ ಉಂಟಾಗಬಹುದು‘ ಎಂದು ವೈದ್ಯರು ಎಚ್ಚರಿಸಿದ್ದಾರೆ.