ಕನ್ನಡ ಯೂಟ್ಯೂಬರ್‌ಗಳಲ್ಲಿ ಸಖತ್ ಹೆಸರು ಮಾಡಿರುವ ಪೂಜಾ ಕೆ ಆರ್ ಮತ್ತು ಸತೀಶ್ ಈರೇಗೌಡರು ಕೆಲವು ತಿಂಗಳ ಹಿಂದೆ ಗಂಡು ಮಗುವನ್ನು ಬರ ಮಾಡಿಕೊಂಡರು.
ಎರಡನೇ ಮಗು ಮಾಡಿಕೊಳ್ಳುವ ಪ್ಲ್ಯಾನ್ ಇರಲಿಲ್ಲ ಆದರೆ ನನ್ನ ಮಗಳು ಒಂಟಿ ಆಗಬಾರದು ಎಂದ ಆಲೋಚನೆಯಲ್ಲಿ ಫ್ಯಾಮಿಲಿ ಪ್ಲ್ಯಾನ್ ಮಾಡಲು ಮುಂದಾಗುತ್ತಾರೆ. ಈರೇಗೌಡ ಫುಲ್ ಫ್ಯಾಮಿಲಿ ಖುಷಿಯಾಗಿದ್ದಾರೆ ಆದರೆ ಪ್ರೆಗ್ನೆನ್ಸಿ ಜರ್ನಿ ಹಂಚಿಕೊಳ್ಳಲು ಹೋಗಿ ಪೂಜಾ ಎಡವಟ್ಟು ಮಾಡಿಕೊಂಡಿದ್ದಾರೆ.
ಈ ಎರಡನೇ ಮಗುವಿನ ಬಗ್ಗೆ ಮಾತನಾಡಿದ ಪೂಜಾ, ನನಗೆ ಗಂಡು ಮಗು ಅಂತಾ 95% ಖಾತ್ರಿಯಾಗಿದ್ದು ಯಾವಾಗ ಅಂದರೆ ಬೆಂಗಳೂರಿನಲ್ಲಿ ಆಸ್ಪತ್ರೆಗೆ ಹೋಗಿದ್ದಾಗ ಅಂದಿದ್ದಾರೆ.
ಹೌದು, ಡಾಕ್ಟರ್ ಬಳಿ ಹೋದಾಗ ನನಗೆ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ ನಾನು ತೂಕ ಹೆಚ್ಚಾಗುತ್ತಿಲ್ಲ ನನ್ನ ಯಾವ ಬಯಕೆ ಇಲ್ಲ ಹಾಗೆ ಹೀಗೆ ಎಂದು ಪೂಜೆ ಒಂದಾದ ಮೇಲೊಂದು ಕಂಪ್ಲೇಂಟ್ ಮಾಇದ್ದರು. ಈ ವೇಳೆ ಹೆಣ್ಣು ಮಕ್ಕಳು ಹುಟ್ಟುವುದಾದರೆ ಜಾಸ್ತಿ symptoms ಇರುತ್ತೆ’ ಎಂದು ಡಾಕ್ಟರ್ ಹೇಳಿದ್ದಾರಂತೆ. ಅಕ್ಕನಿಗೆ ಕಾಲ್ ಮಾಡಿ ಡಾಕ್ಟರ್ ಹೀಗೆ ಹೇಳಿದರು ಅಂತಾ ಹೇಳಿಕೊಂಡು ಸುಮ್ಮನಾದೆ ಎಂದು ವಿಡಿಯೋ ಮಾಡುವ ಭರದಲ್ಲಿ ಪೂಜಾ ಕೆ ರಾಜ್ ಗಂಡು ಮಗುವಾಗುತ್ತದೆ ಎಂದು ವೈದ್ಯರು ನಮಗೆ ಮೊದಲೇ ಪರೋಕ್ಷವಾಗಿ ಹೇಳಿದ್ದರು ಎನ್ನುವುದನ್ನು ಹಂಚಿಕೊಂಡಿದ್ದಾರೆ.