ಗೀತಾ ಜಯಂತಿ ಎಕ್ಸ್​ಪ್ರೆಸ್​ ರೈಲಿನಲ್ಲಿ ಬೆಂಕಿ! ಆಗಿದ್ದೇನು?

public wpadmin

ಎರಡು ದಿನಗಳ ಹಿಂದಷ್ಟೇ, ಮೈಸೂರು ಧರ್​ಬಂಗ್​ ಭಾಗಮತಿ ಎಕ್ಸ್​​ಪ್ರೆಸ್​ ನಿಂತಿದ್ದ ಗೂಡ್ಸ್​ ರೈಲಿಗೆ ಗುದ್ದಿ ದೊಡ್ಡ ಅನಾಹುತ ಆಗಿತ್ತು. ಈಗ ಮಧ್ಯಪ್ರದೇಶದಲ್ಲಿಯೂ ಕೂಡ ಅಂತಹುದೇ ಒಂದು ಆತಂಕಕಾರಿ ಘಟನೆ ನಡೆದಿದೆ. ಮಧ್ಯಪ್ರದೇಶದ ಛತಾರ್​ಪುರ್ ಜಿಲ್ಲೆಯ ಬಳಿ ರವಿವಾರ ಮುಂಜಾನೆ ಗೀತಾ ಎಕ್ಸ್​ಪ್ರೆಸ್​ ರೈಲಿನ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣವೇ ಕಾರ್ಯಪ್ರವೃತ್ತಗೊಂಡ ಇಲಾಖೆ ಅದನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಆದರೂ ಕೂಡ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ರೈಲ್ವೆ ಇಲಾಖೆಯ ಸಿಬ್ಬಂದಿ ತಿಳಿಸಿದೆ.

ಬೆಳಗ್ಗೆ 7.30ರ ಸುಮಾರಿಗೆ ರೈಲಿನ ಕೋಚ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇಶಾನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿಯೇ ಈ ಒಂದು ದುರಂತ ಸಂಭವಿಸಿದೆ. ಈ ಒಂದು ಘಟನೆಯಿಂದಾಗಿ ಟ್ರೇನ್​ನ ಪ್ರಯಾಣ ಒಂದು ಗಂಟೆ ವಿಳಂಬವಾಗಿ ನಡೆದಿದೆ. ಈ ಬಗ್ಗೆ ಮಾತನಾಡಿರುವ ಸ್ಟೇಷನ್ ಮಾಸ್ಟರ್ ಆಶಿಸ್ ಯಾದವ್​. ಗೀತಾ ಜಯಂತಿ ಎಕ್ಸ್​ಪ್ರೆಸ್​ ಇಶಾ ನಗರದಲ್ಲಿ ಎರಡು ನಿಮಿಷಗಳ ಕಾಲ ನಿಂತಿತ್ತು. ನಂತರ ತನ್ನ ಪ್ರಯಾಣ ಮುಂದುವರಿಸಿದ ಕೆಲವೇ ಕ್ಷಣಗಳಲ್ಲಿ ಡಿ 5 ಕೋಚ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ. ಗೀತಾ ಜಯಂತಿ ಎಕ್ಸ್​ಪ್ರೆಸ್ ಕುರುಕ್ಷೇತ್ರ ಹಾಗೂ ಖಜುರಾಹೋ ನಡುವೆ ಪ್ರಯಾಣ ನಡೆಸುತ್ತದೆ.

ಇಶಾನಗರದಿಂದ ಹೊರಟ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಅದನ್ನು ನಂದಿಸುವ ಕಾರ್ಯವನ್ನು ಬಹುಬೇಗ ಮಾಡಲಾಗಿದೆ. ಕೋಚ್​ನ ಕೆಳಗಡೆ ಭಾಗದ ರಬ್ಬರ್ ಹೀಟ್ ಆದ ಕಾರಣ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ಡಿ5 ಕೋಚ್​ಗೆ ಸದ್ಯ ಯಾವುದೇ ಹಾನಿಯಾಗಿಲ್ಲ. ಮೂವರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಂದು ರೈಲ್ವೆ ಇಲಾಖೆಯ ಸಿಬ್ಬಂದಿ ಹೇಳಿದೆ.

Share This Article
Leave a comment