ಗಂಡನ ಜೊತೆ ದೇಸಿ ಗರ್ಲ್ ವೆಕೇಷನ್! ಬಿಕಿನಿಯಲ್ಲಿ ಮಸ್ತ್ ಪೋಸ್ ಕೊಟ್ಟ ಪ್ರಿಯಾಂಕ

public wpadmin

ಬಾಲಿವುಡ್‌ನ ಒಂದು ಕಾಲದ ಸೂಪರ್ ಹೀರೋಯಿನ್ ಸದ್ಯ ಗಂಡ-ಮನೆ ಮಕ್ಕಳು ಅಂತ ಬ್ಯುಸಿ ಆಗಿದ್ದಾರೆ. ಬಾಲಿವುಡ್‌ ಬಿಟ್ಟು ಹಾಲಿವುಡ್‌ನಲ್ಲಿಯೇ ಸೆಟಲ್ ಆಗಿರೋ ಪ್ರಿಯಾಂಕಾ ಚೋಪ್ರಾ ತಮ್ಮ ಸೌಂದರ್ಯವನ್ನ ಹಾಗೆ ಕಾಪಾಡಿಕೊಂಡಿದ್ದಾರೆ. ಬಿಕಿನಿ ತೊಟ್ಟು ಸಮುದ್ರ ತೀರದಲ್ಲಿ ಓಡಾಡುವಷ್ಟು ಸೌಂದರ್ಯ ಉಳಿಸಿಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ವಿಷಯ ಈಗ ಯಾಕೆ ಅಂತ ಅನಿಸಬಹುದು. ಆದರೆ, ಇಲ್ಲಿ ಸಿನಿಮಾ ಮ್ಯಾಟರ್ ಏನೂ ಇಲ್ಲ. ಸ್ವತಃ ಪ್ರಿಯಾಂಕಾ ಚೋಪ್ರಾ ಇದೀಗ ಒಂದಿಷ್ಟು ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಪತಿ ನಿಕ್, ಮಗಳು ಹಾಗೂ ತಾವು ಒಟ್ಟಿಗೆ ಕ್ರೂಸ್‌ನಲ್ಲಿ ಸುಂದರ ಸಮಯ ಕಳೆದಿರೋ ಮ್ಯಾಟರ್ ಇದೆ.
ಪ್ರಿಯಾಂಕಾ ಚೋಪ್ರಾ ಸದ್ಯ ಜಾಲಿ ಮೂಡ್‌ನಲ್ಲಿಯೇ ಇದ್ದಾರೆ. ಮನಸಿಗೆ ಹೇಗೆ ಬೇಕೋ ಹಾಗೆ ಬಿಂದಾಸ್ ಆಗಿಯೆ ಕಾಣಿಸಿಕೊಂಡಿದ್ದಾರೆ. ಕ್ರೂಸ್‌ನಲ್ಲಿ ಬಿಕಿನಿ ತೊಟ್ಟು ಸಖತ್ ಪೋಸ್ ಕೂಡ ಕೊಟ್ಟಿದ್ದಾರೆ. ಪತಿ ನಿಕ್ ಜೋನಸ್ ಅಂತೂ ಮೈಚೆಲ್ಲಿ ಮಲಗಿ ಬಿಟ್ಟಿದ್ದಾರೆ. ಆದರೆ, ಮಗಳು ಆಗಲ್ಲ ಬಿಡಿ. ಇನ್ನು ಚಿಕ್ಕವಳು ಅಲ್ವೇ? ಅದಕ್ಕೆ ಆಟವಾಡುತ್ತಿದ್ದಾಳೆ.

ಪ್ರಿಯಾಂಕಾ ಚೋಪ್ರಾ ಈಗ ಬಾಲಿವುಡ್‌ನಲ್ಲಿ ಯಾವುದೇ ಸಿನಿಮಾ ಮಾಡ್ತಿಲ್ಲ ಅನಿಸುತ್ತದೆ. ಕಳೆದ ಕೆಲವು ವರ್ಷಗಳಿಂದ ಯಾವುದೇ ಸುದ್ದಿನೂ ಇಲ್ಲ ನೋಡಿ. ಆದರೂ, ಹಾಲಿವುಡ್‌ನಲ್ಲಿ ಬ್ಯುಸಿ ಇದ್ದಾರೆ. ಅಲ್ಲಿಯೇ ತಮ್ಮ ಜರ್ನಿ ಮುಂದುವರೆಸಿದಂತೆ ಕಾಣಿಸುತ್ತದೆ. ಈ ಗ್ಯಾಪ್‌ನಲ್ಲಿಯೇ ಪ್ರಿಯಾಂಕಾ ಫ್ಯಾಮಿಲಿ ಜೊತೆಗೆ ಜಾಲಿ ಮೂಡ್‌ನಲ್ಲಿಯೇ ಟೈಮ್ ಸ್ಪೆಂಡ್ ಮಾಡುತ್ತಿದ್ದಾರೆ.

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಹೆಚ್ಚಾಗಿ ಕ್ವಾಲಿಟಿ ಟೈಮ್ ಸ್ಪೆಂಡ್ ಮಾಡುತ್ತಾರೆ. ತಮ್ಮ ತಮ್ಮ ಕೆಲಸದ ಮಧ್ಯೆನೂ ಇದೀಗ ಕ್ರೂಸ್‌ನಲ್ಲಿ ಬಿಂದಾಸ್ ಟೈಮ್ ಕಳೆದಿದ್ದಾರೆ. ತಮಗೆ ಹೇಗೆ ಬೇಕೋ ಹಾಗೆ ಕಾಣಿಸಿಕೊಂಡಿದ್ದಾರೆ. ಬಿಕಿನಿಯಲ್ಲಿ ಪ್ರಿಯಾಂಕಾ ಹೊಳೆದ್ರೆ, ನಿಕ್ ಇಲ್ಲಿ ಶರ್ಟ್‌ ಲೆಸ್ ಹಾಕಿಯೇ ಕಾಣಿಸಿಕೊಂಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಕೊನೆಯದಾಗಿ ಹಿಂದಿಯಲ್ಲಿ ದಿ ಸ್ಕೈ ಈಸ್ ಪಿಂಕ್ ಚಿತ್ರದಲ್ಲಿಯೇ ನಟಿಸಿದ್ದರು. ಇದು 2019 ರಲ್ಲಿಯೇ ರಿಲೀಸ್ ಆಗಿತ್ತು. ಇದಾದ್ಮೇಲೆ ಜೀ ಲೇ ಝರಾ ಚಿತ್ರವನ್ನ ಕೂಡ ಒಪ್ಪಿದ್ದರು. ಆದರೆ, ಈ ಚಿತ್ರ ಇನ್ನು ಶುರು ಆಗಿಯೇ ಇಲ್ಲ. ಫರ್ಹಾನ್ ಅಖ್ತರ್ ಈ ಚಿತ್ರವನ್ನ ಡೈರೆಕ್ಷನ್ ಮಾಡೋರಿದ್ದರು.

ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ನಲ್ಲಿ ಸೂಪರ್ ಸಿನಿಮಾಗಳನ್ನ ಮಾಡಿದ್ದಾರೆ. ಹಿಟ್ ಹೀರೋಯಿನ್ ಅನ್ನೋ ಖ್ಯಾತಿನೂ ಇತ್ತು. ವಾಟ್ಸ್ ಯುವರ್ ರಾಶಿ ಚಿತ್ರದಲ್ಲಿ 12 ರೋಲ್ ಮಾಡಿದ್ದರು. ಫ್ಯಾಷನ್ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಅದ್ಭುತವಾಗಿಯೇ ನಟಿಸಿದ್ದರು. ಹೀಗೆ ಬಾಲಿವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ ಅಂತಲೇ ಹೇಳಬಹುದು.

Share This Article
Leave a comment