ಗಂಡನಿಗೆ ಬೇರೆ ಹೆಣ್ಣಿನೊಂದಿಗೆ ಸಂಬಂಧವಿದ್ಯಾ? ಹೀಗೆ ಪತ್ತೆ ಹಚ್ಚಿ!

public wpadmin

ಪತಿ-ಪತ್ನಿ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಿ ನಿಷ್ಠೆಯಿಂದ ಬಾಳಿದರೆ ಮಾತ್ರ ದಾಂಪತ್ಯ ಜೀವನ ಉತ್ತಮವಾಗಿರಲು ಸಾಧ್ಯ. ಆದರೆ, ಕೆಲವು ಕಾರಣಗಳಿಂದಾಗಿ ನಿಮ್ಮ ಜೀವನ ಸಂಗಾತಿಯು ನಿಮ್ಮ ಬಗ್ಗೆ ಆಸಕ್ತಿಯನ್ನು ಕಳೆದುಕೊಳ್ಳಲು ಪ್ರಾರಂಭಿಸಬಹುದು. ಯಾವುದೇ ವಿವಾಹಿತ ಮಹಿಳೆಯಾಗಲಿ ತನ್ನ ಪತಿ ಇನ್ನೊಬ್ಬ ಮಹಿಳೆಯತ್ತ ಆಕರ್ಷಿತರಾಗುವುದಾಗಲಿ ಅಥವಾ ಇನ್ನೊರ್ವ ಪ್ರೀತಿಸುತ್ತಿದ್ದಾನೆ ಎಂದರೆ ಸಹಿಸಿಕೊಳ್ಳುವುದಿಲ್ಲ. ಮಹಿಳೆಯರು ತಮ್ಮ ಪರಿವಾರವನ್ನು ಬಿಟ್ಟು ಆ ಪುರುಷನ ಮೇಲಿನ ನಂಬಿಕೆಯ ಮೇಲೆ ಆತನನ್ನು ವಿವಾಹವಾಗಿ ಸಂಸಾರ ನಡೆಸುತ್ತಾಳೆ. ಹೀಗಿರುವಾಗ ಪತಿ ಆಕೆಗೆ ಮೋಸ ಮಾಡುವುದನ್ನು ಯಾವ ಹೆಂಗಸರು ಕೂಡ ಒಪ್ಪುವುದಿಲ್ಲ.


ಆರಂಭಿಕ ಹಂತದಲ್ಲಿ ನಿಮ್ಮ ಪತಿಯ ಕೆಲವು ನಡವಳಿಕೆಗಳನ್ನು ಪತ್ತೆಹಚ್ಚುವ ಮೂಲಕ ಈ ಸಮಸ್ಯೆಯಿಂದ ಮುಂದಾಗುವು ಅನಾಹುತವನ್ನು ತಪ್ಪಿಸಬಹುದು. ನಿಮ್ಮ ಪತಿ ತನ್ನ ಫೋನ್ ಅನ್ನು ಮುಟ್ಟಲು ಬಿಡದೇ ಇರುವುದು ಅನೈತಿಕ ಸಂಬಂಧ ಹೊಂದಿರುವುದಕ್ಕೆ ಮೊದಲ ಸೂಚನೆ ಆಗಿದೆ. ಅವರ ಫೋನ್ನಲ್ಲಿ ಏನೋ ರಹಸ್ಯ ಅಡಗಿರಬಹುದು, ಯಾರೊಂದಿಗಾದರೂ ಸಂಬಂಧವನ್ನು ಹೊಂದಿರಬಹುದು, ಹಾಗಾಗಿ ಅದನ್ನು ಆತ ಮರೆಮಾಡಲು ಪ್ರಯತ್ನಿಸುತ್ತಿದ್ದಾನೆ ಎಂದು ಅರ್ಥ ಮಾಡಿಕೊಳ್ಳಬಹುದು. ನಿಮ್ಮ ಪತಿ ನಿಮ್ಮಿಂದ ಸಣ್ಣ ವಿಚಾರಗಳನ್ನು ಮರೆಮಾಚಲು ಪ್ರಾರಂಭಿಸಿದರೆ, ಆತನ ಮನಸ್ಸಿನಲ್ಲಿ ಏನಾದರೂ ಹೇಳಿಕೊಳ್ಳಲಾಗದಂತಹ ವಿಚಾರವಿದೆ ಎಂದು ಅರ್ಥಮಾಡಿಕೊಳ್ಳಿ. ಅವರು ಮಾಡಿರುವ ತಪ್ಪನ್ನು ನಿಮ್ಮಿಂದ ಮರೆ ಮಾಡುತ್ತಿದ್ದಾರೆ ಎಂದರ್ಥ. ಆಗ ನೀವು ಈ ಬಗ್ಗೆ ಅವರನ್ನು ನೇರವಾಗಿ ಕೇಳಿ.
ಸಂಬಂಧದಲ್ಲಿ ಪ್ರೀತಿ ಮಾತ್ರ ಇರಬೇಕು. ಆ ಸ್ಥಳಕ್ಕೆ ಹಣ ಬರಲು ಪ್ರಾರಂಭಿಸಿದರೆ, ಯಾವುದೇ ಅರ್ಥವಿರುವುದಿಲ್ಲ. ನಿಮ್ಮ ಪತಿ ಕೇವಲ ಹಣಕ್ಕಾಗಿ ನಿಮ್ಮ ಬಳಿಗೆ ಬರುತ್ತಿದ್ದರೆ, ನಿಮ್ಮೊಂದಿಗೆ ಸಿಹಿಯಾಗಿ ಮಾತನಾಡುತ್ತಿದ್ದರೆ, ಅವನು ತನ್ನ ಸ್ವಂತ ಅಗತ್ಯಗಳಿಗಾಗಿ ಮಾತ್ರ ನಿಮ್ಮನ್ನು ಲಾಭವಾಗಿ ಬಳಸಿಕೊಳ್ಳುತ್ತಿರಬಹುದು
ಇಲ್ಲಿಯವರೆಗೆ ನಿಮ್ಮನ್ನು ಪ್ರೀತಿಸುತ್ತಿದ್ದ ಗಂಡ ಇದ್ದಕ್ಕಿದ್ದಂತೆ ನಿಮ್ಮೊಂದಿಗೆ ಸಣ್ಣಪುಟ್ಟ ವಿಚಾರಗಳಿಗೆ ಜಗಳವಾಡಲು ಶುರು ಮಾಡಿದರೆ, ನಿಮ್ಮನ್ನು ರೇಗಿಸುತ್ತಿದ್ದರೆ, ಅವರ ಜೀವನ ಬೇರೆಯವರೊಂದಿಗೆ ಅಂಟಿಕೊಂಡಿದೆ ಎಂದು ಅರ್ಥಮಾಡಿಕೊಳ್ಳಿ

Share This Article
Leave a comment