ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಬಿಡುಗಡೆಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಇದರ ನಡುವೆ ಅಲ್ಲು ಅರ್ಜುನ್ ಖಡಕ್ ಆಗಿರುವ ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಚಿತ್ರದ ಅಪ್‌ಡೇಟ್ ಕೊಟ್ಟಿದ್ದಾರೆ.
ಚೇರ್ ಮೇಲೆ ಕುಳಿತು ಪುಷ್ಪರಾಜ್ (ಅಲ್ಲು ಅರ್ಜುನ್) ಖಡಕ್ ಆಗಿ ಪೋಸ್ ನೀಡಿದ್ದಾರೆ. ನಟನ ಲುಕ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಇನ್ನೂ ‘ಪುಷ್ಪ 2’ ರಿಲೀಸ್ ಕುರಿತು ಕೆಲ ಸುಳ್ಳು ವದಂತಿಗಳು ಹಬ್ಬಿತ್ತು. ಡಿಸೆಂಬರ್‌ನಲ್ಲಿ ಸಿನಿಮಾ ರಿಲೀಸ್ ಆಗೋದೆ ಡೌಟ್ ಎನ್ನಲಾದ ಸುದ್ದಿಗೆ ಹೊಸ ಪೋಸ್ಟರ್ ಮೂಲಕ ಅಲ್ಲು ಅರ್ಜುನ್ ಕ್ಲ್ಯಾರಿಟಿ ನೀಡಿದ್ದಾರೆ. ‘ಪುಷ್ಪ 2’ ಡಿ.6ರಂದೇ ರಿಲೀಸ್ ಆಗುತ್ತಿದೆ ಎಂದು ಅಧಿಕೃತ ಮಾಹಿತಿ ನೀಡಿದ್ದಾರೆ.
ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಅನಸೂಯ, ರಾವ್ ರಮೇಶ್, ಫಹಾದ್ ಫಾಸಿಲ್ ಸೇರಿದಂತೆ ಅನೇಕರು ನಟಿಸಿದ್ದಾರೆ.