ಕಿರುತೆರೆಯ ಜನಪ್ರಿಯ ನಟಿ ಹಿನಾ ಖಾನ್ ಪ್ರಸ್ತುತ ತಮ್ಮ ಜೀವನದಲ್ಲಿ ಕೆಟ್ಟ ದಿನಗಳನ್ನು ಎದುರಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ, ನಟಿ ತನಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ಘೋಷಿಸಿದರು. ಸದ್ಯ ನಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿನಾ ಖಾನ್ ಸದ್ಯ ಕಿಮೊಥೆರಪಿಗೆ ಒಳಗಾಗುತ್ತಿದ್ದಾರೆ. ನಟಿ ತಮ್ಮ ಚಿಕಿತ್ಸೆ ಮತ್ತು ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಅಪ್ಡೇಟ್ ನೀಡುತ್ತಿದ್ದಾರೆ. ಈಗಂತೂ ಹೀನಾ ವಿಶೇಷ ಪೋಸ್ಟ್ ಒಂದನ್ನು ಶೇರ್ ಮಾಡಿ ಮತ್ತೊಂದು ಕಾಯಿಲೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಕಿಮೋಥೆರಪಿಯ ಅಡ್ಡ ಪರಿಣಾಮಗಳಿಂದ ನಟಿಯ ಸ್ಥಿತಿ ಹದಗೆಟ್ಟಿದೆ.
ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ ಹಿನಾ ಖಾನ್ ಕ್ಯಾನ್ಸರ್ ನಂತರದ ಅನಾರೋಗ್ಯವನ್ನು ಬಹಿರಂಗಪಡಿಸಿದ್ದಾರೆ. ಕಿಮೋಥೆರಪಿಯ ಅಡ್ಡ ಪರಿಣಾಮಗಳಿಂದ ನಟಿ ಮ್ಯೂಕೋಸಿಟಿಸ್‌ನಿಂದ ಬಳಲುತ್ತಿದ್ದಾರೆ. ಪೋಸ್ಟ್ ಅನ್ನು ಹಂಚಿಕೊಂಡ ನಟಿ, ‘ಒಂದು ಕಡೆ ಕೀಮೋಥೆರಪಿ ಮತ್ತು ಇನ್ನೊಂದು ಮ್ಯೂಕೋಸಿಟಿಸ್. ವೈದ್ಯರು ಮ್ಯೂಕೋಸಿಟಿಸ್‌ಗೆ ಚಿಕಿತ್ಸೆಯಾಗಿ ಕೆಲವು ಸಲಹೆಗಳನ್ನು ನೀಡಿದ್ದಾರೆ. ಆದರೆ ನಿಮ್ಮಲ್ಲಿ ಯಾರಾದರೂ ಈ ರೋಗವನ್ನು ಎದುರಿಸಿದ್ದರೆ, ಪರಿಣಾಮಕಾರಿ ಔಷಧವನ್ನು ಹೇಳಿ. ಇದು ತುಂಬಾ ನೋವಿನ ಪ್ರಯಾಣ. ಏನನ್ನೂ ತಿನ್ನಲು ಸಾಧ್ಯವಿಲ್ಲ’ ಅವರು ಎಂದಿದ್ದಾರೆ.
ಹಿನಾ ಖಾನ್ ಅವರ ಪೋಸ್ಟ್‌ಗೆ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ. ‘ಯಾರಿಗಾದರೂ ತಿಳಿದಿದ್ದರೆ ಸೂಚಿಸಿ’ ಎಂದು ಕೇಳಿಕೊಂಡಿದ್ದಾರೆ. ‘ಶೀಘ್ರವೇ ಗುಣವಾಗಲಿ. ನಿಮಗಾಗಿ ಪ್ರಾರ್ಥಿಸುತ್ತಿದ್ದೇವೆ…’ ಎಂದು ಹೇಳಿದ್ದಾರೆ. ‘ಸರಿಯಾದ ಚಿಕಿತ್ಸೆ ಪಡೆಯಿರಿ… ತಪ್ಪು ಸಲಹೆಯು ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಈ ಕಾಯಿಲೆ ಉಂಟದಾಗ ಬಾಯಲ್ಲಿ ಹುಣ್ಣುಗಳು ಏಳುತ್ತವೆ.