ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ ಪ್ರತಿವರ್ಷವೂ ಅದ್ಧೂರಿಯಾಗಿ ನಡೆಯುತ್ತದೆ. ಪ್ರತಿ ವರ್ಷ ಇದಕ್ಕೆ ನಾನಾ ಕಡೆಯಿಂದ ಭಕ್ತರು ಆಗಮಿಸುತ್ತಾರೆ. ವಿಶೇಷ ಅಂದರೆ ಈ ಬಾರಿ ಗವಿಸಿದ್ದೇಶ್ವರ ಜಾತ್ರೆಗೆ ಅತಿಥಿಯಾಗಿ ಭಾಗಿಯಾಗಲು ಅಮಿತಾಭ್ ಬಚ್ಚನ್‌ಗೆ ಮಠದ ಆಡಳಿತ ಮಂಡಳಿ ಆಹ್ವಾನ ನೀಡಿದ್ದಾರೆ.
ಜನವರಿ 15ರಂದು ನಡೆಯಲಿರುವ ಗವಿಸಿದ್ದೇಶ್ವರ ಜಾತ್ರೆಗೆ ಆಮಂತ್ರಿಸಲು ಇತ್ತೀಚೆಗೆ ಅಮಿತಾಭ್‌ರನ್ನು ಮಠದ ಆಡಳಿತ ಮಂಡಳಿವರು ಭೇಟಿ ಮಾಡಿದ್ದಾರೆ. ಈ ವೇಳೆ, ಬಿಗ್ ಬಿ ಕೂಡ ಖುಷಿಯಿಂದ ಆಮಂತ್ರಣ ಸ್ವೀಕರಿಸಿ ಉತ್ತಮ ರೆಸ್ಪಾನ್ಸ್ ನೀಡಿದ್ದಾರೆ. ಹೀಗಾಗಿ ಅವರು ಈ ಜಾತ್ರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಜಾತ್ರೆಯು ದಕ್ಷಿಣ ಭಾರತದ ಕುಂಭ ಮೇಳ ಎಂದೇ ಖ್ಯಾತಿ ಪಡೆದಿದೆ. ಕೊಪ್ಪಳದ ಗವಿಸಿದ್ದೇಶ್ವರ ಮಠದ ಜಾತ್ರೆಗೆ ಅಮಿತಾಭ್ ಬಚ್ಚನ್ ಆಗಮಿಸಿದರೆ ರಾಷ್ಟ್ರೀಯ ಮಟ್ಟದಲ್ಲಿ ಮಹತ್ವ ಪಡೆಯಲಿದೆ. ಲಕ್ಷಾಂತರ ಜನ ಗವಿಸಿದ್ದೇಶ್ವರ ಜಾತ್ರೆ ಮಹೋತ್ಸವದಲ್ಲಿ ಭಾಗಿಯಾಗುತ್ತಾರೆ.