ಕೊನೆಗೂ ನಟ ದರ್ಶನ್​​ಗೆ ಸಿಕ್ತು ಸರ್ಜಿಕಲ್ ಚೇರ್ ಭಾಗ್ಯ

public wpadmin

ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿದಾಗಿನಿಂದ ದರ್ಶನ್​​ಗೆ ತೊಂದರೆ ತಪ್ಪುತ್ತಿಲ್ಲ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದಾಗ ತಕ್ಕಮಟ್ಟಿಗೆ ಅಡ್ಜಸ್ಟ್ ಆಗಿದ್ದಂತಹ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿ ಪ್ರತಿ ವಿಷಯಕ್ಕೂ ಪರದಾಡುವಂತಾಗಿದೆ. ಹೀಗಿದ್ದರೂ ಕೊನೆಗೂ ನಟನಿಗೆ ಸರ್ಜಿಕಲ್ ಚೇರ್ ಭಾಗ್ಯ ಸಿಕ್ಕಿದೆ. ಬೆನ್ನುನೋವು ಹಿನ್ನೆಲೆ ನಟನ ಮನವಿ ಹಾಗೂ ವೈದ್ಯರ ವರದಿಯನ್ನು ನೋಡಿ ಕೊನೆಗೂ ನಟ ದರ್ಶನ್​​ಗೆ ಸರ್ಜಿಕಲ್ ಚೇರ್ ನೀಡಲು ವ್ಯವಸ್ಥೆ ಮಾಡಲಾಗಿದೆ.

ದರ್ಶನ್ ಅವರಿಗೆ ಕೊನೆಗೂ ಸರ್ಜಿಕಲ್ ಚೇರ್ ಭಾಗ್ಯ ಸಿಕ್ಕಿದೆ. ಸೆಪ್ಟೆಂಬರ್ 2ರಂದು ಸಂಜೆ ದರ್ಶನ್ ಸೆಲ್ ಗೆ ಸರ್ಜಿಕಲ್ ಚೇರ್ ಬರಲಿದೆ. ಕೂಲಂಕುಷವಾಗಿ ಆರೋಗ್ಯ ತಪಾಸಣೆ ಹಾಗೂ ರಿಪೋರ್ಟ್ ಪರಿಶೀಲನೆ ಬಳಿಕ ದರ್ಶನ್ ಗೆ ಚೇರ್ ಕೊಡಲು ಒಪ್ಪಿಗೆ ನೀಡಲಾಗಿದೆ. ದರ್ಶನ್ ಆರೋಗ್ಯದ ಬಗ್ಗೆ ವೈದ್ಯರು ಕೊಟ್ಟ ವರದಿ ಬಳಿಕ ಕಾರಾಗೃಹ ಇಲಾಖೆ ಡಿಐಜಿ ಸರ್ಜಿಕಲ್ ಚೇರ್ ಗೆ ಅಸ್ತು ಎಂದಿದ್ದಾರೆ. ಅರ್ಥೋಪಿಡಿಕ್ ವೈದ್ಯರು ಹಾಗೂ ಪರಪ್ಪನ ಅಗ್ರಹಾರದಿಂದ ವರದಿ ತರಸಿಕೊಂಡು ಪರಿಶೀಲನೆ ಮಾಡಲಾಗಿದೆ. ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ದರ್ಶನ್ ಗೆ ಚೇರ್ ನೀಡಲಿದ್ದಾರೆ. ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ನಟನಿಗೆ ಸರ್ಜಿಕಲ್ ಚೇರ್ ಸಿಗಲಿದೆ.

ನಟ ದರ್ಶನ್ ಗೆ ಇವತ್ತು ಸರ್ಜಿಕಲ್ ಚೇರ್ ಕೊಡುವ ಸಾಧ್ಯತೆ ಇತ್ತು ಎಂದು ಮೊದಲೇ ಹೇಳಲಾಗಿತ್ತು. ಬೆಂಗಳೂರು ಪರಪ್ಪನ ಅಗ್ರಹಾರದಿಂದ ಮೆಡಿಕಲ್ ರಿಪೋರ್ಟ್ ತರಿಸಿಕೊಂಡ ಬಳ್ಳಾರಿ ಜೈಲಾಧಿಕಾರಿಗಳು ಅದನ್ನು ಪರಿಶೀಲನೆ ಮಾಡಿಸಿಕೊಂಡಿದ್ದರು. ಈ ಮೊದಲು ಪರಪ್ಪನ ಅಗ್ರಹಾರಕ್ಕೆ ನೀಡಿದ್ದ ಮೆಡಿಕಲ್ ರಿಪೋರ್ಟ್​ನಲ್ಲಿ ಬೆನ್ನುನೋವು ಸಂಬಂಧದ ಮೆಡಿಕಲ್ ರಿಪೋರ್ಟ್ ಸಲ್ಲಿಸಲಾಗಿತ್ತು. ಆ ನಂತರ ಪರಪ್ಪನ ಅಗ್ರಹಾರದಿಂದ ತರಿಸಿಕೊಂಡ ಮೆಡಿಕಲ್ ರಿಪೋರ್ಟ್ ಪರಿಶೀಲನೆ ಮಾಡಲಾಗಿದೆ. ಬಳ್ಳಾರಿ ಜೈಲು ವೈದ್ಯಾಧಿಕಾರಿಗಳು ಇದನ್ನು ಪರಿಶೀಲನೆ ಮಾಡಿದ್ದರು ಎನ್ನಲಾಗಿದೆ.

Share This Article
Leave a comment