ಕಾಫಿನಾಡಲ್ಲಿ ಕಾಡಾನೆಗಳ ಹಾವಳಿ – ಜಮೀನಿನಲ್ಲಿದ್ದ ಪೈಪ್, ಯಂತ್ರಗಳು ಧ್ವಂಸ!

public wpadmin

ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು ಸಮೀಪದ ತುಡುಕೂರಿನಲ್ಲಿ ರೈತರೊಬ್ಬರ ಜಮೀನಿನಲ್ಲಿದ್ದ ಸಾವಿರಾರು ರೂ. ಮೌಲ್ಯದ ಪೈಪ್ ಹಾಗೂ ಔಷಧಿ ಸಿಂಪಡಿಸುವ ಯಂತ್ರವನ್ನು ಹಾಗೂ ಬ್ಯಾರಲ್‍ಗಳನ್ನು ಕಾಡಾನೆಗಳು ಧ್ವಂಸ ಮಾಡಿವೆ.

ರೈತರ ಕಾಫಿ ತೋಟದಲ್ಲಿ ಬೀಡು ಬಿಟ್ಟಿರುವ 17 ಆನೆಗಳು, ತೋಟದಲ್ಲಿ ಇಟ್ಟಿದ್ದ ಔಷಧದ ಬ್ಯಾರೆಲ್‍ಗಳ, ಸ್ಪ್ರೇಯರ್ ಮಿಷನ್, ಪೈಪ್ ಸೇರಿದಂತೆ ಕೃಷಿ ಸಲಕರಣೆಗಳನ್ನು ಧ್ವಂಸ ಮಾಡಿವೆ. ಗುರುವಾರ ಕಾಫಿ ತೋಟಕ್ಕೆ ಆನೆಗಳು ಲಗ್ಗೆ ಇಟ್ಟಿದ್ದವು. ಈ ವೇಳೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಜೀವ ಭಯದಲ್ಲಿ ಓಡಿ ಹೋಗಿದ್ದರು.

ಕಾಫಿನಾಡಲ್ಲಿ ಕಾಡಾನೆಗಳ ಹಿಂಡಿನ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು. ಆನೆಗಳ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು. ಅಲ್ಲದೇ ಆನೆಗಳನ್ನು ಕಾಫಿ ತೋಟದಿಂದ ಓಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Share This Article
Leave a comment