ಬೆಂಗಳೂರು: ಮಂಗಳೂರು ಮೂಲದ ಕೃತಿ ಶೆಟ್ಟಿ ಇದೀಗ ಬಾಲಿವುಡ್ಗೆ ಪದಾರ್ಪಣೆ ಮಾಡಲಿದ್ದಾರೆ.
ಈಕೆ ಕನ್ನಡದ ಯಾವುದೇ ಸಿನಿಮಾದಲ್ಲಿಯೂ ನಟಿಸಿಲ್ಲವಾದರೂ, ಕರ್ನಾಟಕ ಮೂಲದ ನಟಿಯಾಗಿಯೇ ಗುರುತಿಸಿಕೊಂಡಿದ್ದಾರೆ.
ಕೃತಿ ಶೆಟ್ಟಿ, ವರುಣ್ ಧವನ್ ನಟನೆಯ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ವರುಣ್ ಧವನ್ರ ಹೊಸ ಸಿನಿಮಾವನ್ನು ಅವರ ತಂದೆ ಡೇವಿಡ್ ಧವನ್ ನಿರ್ದೇಶನ ಮಾಡಲಿದ್ದು, ಈ ಸಿನಿಮಾದಲ್ಲಿ ಕೃತಿ ಶೆಟ್ಟಿ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗಿದೆ.
ಕೃತಿ ಶೆಟ್ಟಿ ಬಾಲಿವುಡ್ಗೆ ಪದಾರ್ಪಣೆ ಮಾಡುವ ಸುದ್ದಿ ಹೊರಬೀಳುತ್ತಿದ್ದಂತೆ ನಟಿ ಸಹ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲ ಮೂಲಗಳ ಪ್ರಕಾರ ಕೃತಿ ಹಾಗೂ ವರುಣ್ ಧವನ್ರ ಹೊಸ ಸಿನಿಮಾದ ಮುಹೂರ್ತ ಶೀಘ್ರವೇ ನಡೆಯಲಿದೆಯಂತೆ.