ಬೆಂಗಳೂರು: ಬಾಬುಸಾಬ್‌ಪಾಳ್ಯ ಕಟ್ಟಡ ದುರಂತ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದು, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
ಕಟ್ಟಡ ಕುಸಿದ ಘಟನಾ ಸ್ಥಳಕ್ಕೆ ಸಿಎಂ ಭೇಡಿ ನೀಡಿದ್ದು, ಸಚಿವ ಬೈರತಿ ಸುರೇಶ್ ಕೂಡ ಸಾಥ್ ನೀಡಿದ್ದಾರೆ. ಅನುಮತಿ ಪಡೆಯದೆ ಕಟ್ಟುತ್ತಿರುವ ಕಟ್ಟಡವನ್ನ ಕೂಡಲೇ ನಿಲ್ಲಿಸಲು ಸಿಎಂ ಸೂಚನೆ ನೀಡಿದ್ದಾರೆ. ಮೃತರ ಕುಟುಂಬಕ್ಕೆ ಕಾರ್ಮಿಕ ಇಲಾಖೆಯಿಂದ ತಲಾ 2 ಲಕ್ಷ ರೂ. ಹಾಗೂ ಪಾಲಿಕೆಯಿಂದ ಮೂರು ತಲಾ ಲಕ್ಷ ರೂ. ಪರಿಹಾರ ಕೂಡಲೇ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ನಿನ್ನೆ ಇರಲಿಲ್ಲ, ವಯನಾಡಿಗೆ ಹೋಗಿದ್ದೆ. ಗಾಯಗೊಂಡಿರುವವರಿಗೆ ಸರ್ಕಾರ ಆಸ್ಪತ್ರೆಯ ಖರ್ಚು ಭರಿಸುತ್ತದೆ. ಮೃತರ ಶವಗಳನ್ನು ಕಳಿಸಿಕೊಡುವ ಕೆಲಸ ಕೂಡ ಮಾಡಲಾಗುತ್ತದೆ ಎಂದು ಹೇಳಿದರು.