ಒಡಿಶಾ ಸರ್ಕಾರದ ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೆ 1 ಮುಟ್ಟಿನ ರಜೆ ಘೋಷಣೆ

public wpadmin

ಭುವನೇಶ್ವರ್: ಒಡಿಶಾ (Odisha) ಸರ್ಕಾರದ ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೆ 1 ದಿನ ಮುಟ್ಟಿನ ರಜೆಯನ್ನು ಘೋಷಣೆ ಮಾಡಿದೆ.

ಮಹಿಳೆಯರು ವಾರ್ಷಿಕವಾಗಿ ಪ್ರಸ್ತುತ ಪಡೆಯುವ 15 ದಿನಗಳ ಸಾಂದರ್ಭಿಕ ರಜೆ (CL) ಹೊರತಾಗಿ ವಾರ್ಷಿಕವಾಗಿ 12 ದಿನಗಳ ಹೆಚ್ಚುವರಿ ರಜೆ ಸಿಗಲಿದೆ ಎಂದು ಸಿಎಂ ಕಚೇರಿ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆ ತಿಳಿಸಿದೆ. 

ಮಹಿಳಾ ಉದ್ಯೋಗಿಗಳು ತಿಂಗಳಿಗೆ ಒಂದು ದಿನದ ವೇತನ ಸಹಿತ ಋತುಚಕ್ರದ ರಜೆಗೆ ಅರ್ಹರಾಗಿರುತ್ತಾರೆ ಎಂದು ಸ್ವಾತಂತ್ರ‍್ಯ ದಿನದಂದು ಉಪಮುಖ್ಯಮಂತ್ರಿ ಪ್ರವತಿ ಪರಿದಾ ಅವರು ಘೋಷಣೆಯನ್ನು ಮಾಡಿದ್ದರು. ಅದರನ್ವಯ ಸರ್ಕಾರ ಈಗ ಜಾರಿ ಮಾಡಿದೆ. 

Share This Article
Leave a comment