ಸಾಕಷ್ಟು ಜನ ತ್ವಚೆಗೆ ಬೇಕಾಗಿರೋ ಸಾಕಷ್ಟು ಅಂಶಗಳ ಬಗ್ಗೆ ಅರಿತುಕೊಂಡು ಸಿಕ್ಕ ಸಿಕ್ಕ ಕ್ರೀಮ್ ಗಳನ್ನು ಮುಖಕ್ಕೆ ಹಚ್ಚಿಕೊಳ್ಳುತ್ತಾರೆ. ಆದರೆ ಹೀಗೆ ಮಾರುಕಟ್ಟೆಯಲ್ಲಿ ಸಿಗೋ ಕ್ರೀಮ್ ಹಚ್ಚಿಕೊಳ್ಳುವುದರಿಂದ ಕಾಲ ಕ್ರಮೇಣ ತ್ವಚೆ ಹಾಳಾಗುತ್ತಾ ಹೋಗಬಹುದು. ಅದಕ್ಕೆ ಮನೆಯಲ್ಲಿ ಈ ರೀತಿ ಸಿಂಪಲ್ ಟಿಪ್ಸ್ ಫಾಲೋ ಮಾಡಿ..
ಮೊದಲನೆಯದಾಗಿ ಮುಖದ ಮೇಲಿನ ಊತ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಐಸ್ ಕ್ಯೂಬ್ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ. ಇದು ಮುಖದ ಮೇಲಿನ ಊತ ಮತ್ತು ಪಫಿನೆಸ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದಿನಕ್ಕೆ ಒಂದು ಬಾರಿ ಐಸ್ ಕ್ಯೂಬ್ನಿಂದ ಮುಖಕ್ಕೆ ರಬ್ ಮಾಡಿಕೊಂಡರೇ ಉತ್ತಮ.
ಎರಡನೆಯದಾಗಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಶೀತದ ಉಷ್ಣತೆಯು ರಕ್ತನಾಳಗಳು ಸಂಕುಚಿತಗೊಳ್ಳಲು ಕಾರಣವಾಗುತ್ತದೆ. ಮತ್ತು ನೀವು ಐಸ್ ಅನ್ನು ಹಚ್ಚಿದಾಗ ಅವು ಹಿಗ್ಗುತ್ತವೆ. ಜೊತೆಗೆ ರಕ್ತದ ಹರಿವನ್ನು ಸುಧಾರಿಸುತ್ತದೆ.
ಬಹಳ ಮುಖ್ಯವಾಗಿ ಸಾಕಷ್ಟು ವಯಸ್ಕರಲ್ಲಿ ಅಥವಾ ತಾರುಣ್ಯಕ್ಕೆ ಬರುವ ಯುವಕ, ಯುವತಿಯರಲ್ಲಿ ಮೊಡವೆಗಳು ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಹೀಗಾಗಿ ಆ ಮೊಡವೆಗೆ ಮುಟ್ಟದೇ ಹಾಗೇ ಬಿಟ್ಟರೇ ನಿಧನವಾಗಿ ಅದು ಕಡಿಮೆಯಾಗುತ್ತಾ ಬರುತ್ತದೆ. ಇಲ್ಲವಾದರೆ ಮೊಡವೆಗೆ ದಕ್ಕೆ ಮಾಡಿದರೇ ಕಲೆ ಹಾಗೇ ಉಳಿದುಕೊಂಡು ಬಿಡುತ್ತದೆ.
ಐಸ್ ಕ್ಯೂಬ್ ಅಪ್ಲೈ ಮಾಡಿಕೊಳ್ಳುವುದರಿಂದ ಬ್ಯಾಕ್ಟೀರಿಯಾವನ್ನು ಕೊಲ್ಲುವ ಮೂಲಕ ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ ಮುಖದ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ನೀವು ಐಸ್ ಕ್ಯೂಬ್ ಹಚ್ಚಿಕೊಂಡಾಗ ಒತ್ತಡವನ್ನು ಕಡಿಮೆ ಜೊತೆಗೆ ಹೆಚ್ಚು ಶಾಂತಿಯನ್ನು ಉತ್ತೇಜಿಸುತ್ತದೆ.