ಏಯ್ ಕುಮಾರಸ್ವಾಮಿ ನಿನ್ನ ರೇಟ್ ಹೇಳು – ವಿವಾದಾತ್ಮಕ ಪದ ಬಳಸಿದ ಜಮೀರ್

public wpadmin

ರಾಮನಗರ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಚಿವ ಜಮೀರ್ ಅಹ್ಮದ ವಿವಾದಾತ್ಮಕ ಪದ ಪ್ರಯೋಗ ಮಾಡಿದ್ದಾರೆ.

ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ರ‍್ಥಿ ಪರ ಪ್ರಚಾರ ಮಾಡುವಾಗ ಸಚಿವ ಜಮೀರ್ ನಾಲಿಗೆ ಹರಿಬಿಟ್ಟಿದ್ದಾರೆ. ಏಯ್ ಕುಮಾರಸ್ವಾಮಿ ನಿನ್ನ ರೇಟ್ ಹೇಳು ಎಂದೆಲ್ಲ ಲಘುವಾಗಿ ಪದ ಪ್ರಯೋಗಿಸಿದ್ದಾರೆ.

ಸಚಿವ ಜಮೀರ್ ಅಹ್ಮದ್, ರ‍್ಣದ ಮೇಲೆ ಟೀಕೆ ಮಾಡಿದ್ದಾರೆ. ಯೋಗೇಶ್ವರ್ ಹೊಗಳುವ ಭರದಲ್ಲಿ ಕರಿಯ ಕುಮಾರಸ್ವಾಮಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಯೋಗೇಶ್ವರ್ ನಮ್ಮ ಪರ‍್ಟಿಯಿಂದ ರಾಜಕೀಯ ಪ್ರಾರಂಭ ಮಾಡಿದ್ರು. ಕೆಲವು ವ್ಯತ್ಯಾಸಗಳಾಗಿ ಬಿಜೆಪಿಗೆ ಹೋದ್ರು. ಜೆಡಿಎಸ್‌ಗೆ ಬರಬೇಕು ಅಂತಿದ್ರೂ ಕರಿಯ ಕುಮಾರಸ್ವಾಮಿ, ಬಿಜೆಪಿಗಿಂತ ಡೇಂಜರ್ ಅಂತ ಜೆಡಿಎಸ್‌ಗೆ ಹೋಗಿಲ್ಲ. ಹಿಂದೆ ಹಿಜಬ್, ಪಜಾಬ್ ಬೇಡ ಅಂದಿದ್ದೀಯಾ. ಈಗ ನಿನಗೆ ಮುಸಲ್ಮಾನರ ವೋಟ್ ಬೇಕಾ ಎಂದು ಜಮೀರ್ ಟೀಕಿಸಿದ್ದಾರೆ.

ಏಯ್ ಕುಮಾರಸ್ವಾಮಿ, ನಿನ್ನ ರೇಟ್ ಹೇಳು? ಮುಸಲ್ಮಾನರು ಒಂದೊಂದ್ ಪೈಸೆ ಹಾಕಿ ಇಡೀ ನಿನ್ನ ಕುಟುಂಬವನ್ನೇ ಖರೀದಿ ಮಾಡ್ತಾರೆ ಎಂದು ಲಘುವಾಗಿ ಮಾತನಾಡಿದ್ದಾರೆ.

Share This Article
Leave a comment