ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ!

public wpadmin

ಹರಿಯಾಣ : ಹರಿಯಾಣದ ಬೃಹತ್ ಗಾತ್ರದ ಕೋಣ ಇದೀಗ ದೇಶಾದ್ಯಂತ ಸದ್ದು ಮಾಡುತ್ತಿದೆ.

ಹೌದು, ಅನ್ಮೋಲ್ ಎಂಬ ಹೆಸರಿನ ಕೋಣಕ್ಕೆ ಬರೋಬ್ಬರಿ 23ಕೋಟಿ ರೂ ಬೆಲೆ ನಿಗದಿಪಡಿಸಿಸಲಾಗಿದೆ. 8 ವರ್ಷದ ಈ ಕೋಣ ಎಲ್ಲರ ಗಮನ ಸೆಳೆದಿದೆ. ಈ ಕೊಬ್ಬಿದ ಕೋಣ ಬರೋಬ್ಬರಿ 1500 ಕೆಜಿ ತೂಕವಿದೆ. ಹರಿಯಾಣದ ಸಿರ್ಸಾ ಜಿಲ್ಲೆಯ ಹಿಸ್ಸು ಗ್ರಾಮದ ನಿವಾಸಿ ಪಾಲ್ಮಿಂದ್ರ ಗಿಲ್ ಅವರು ಸಾಕಿರುವ ಈ ಕೋಣವು, ತನ್ನ ದೈತ್ಯಾಕಾರದಿಂದಲೇ ಸುತ್ತಲಿನ ಹಳ್ಳಿಗಳಲ್ಲಿ ಹೆಸರುವಾಸಿಯಾಗಿದೆ.

ಬೃಹದಾಕಾರದ ದೇಹ, ಸದೃಢ ಮೈಕಟ್ಟು ,ಕಪ್ಪು ಬಣ್ಣ ಅನ್ಮೋಲ್ ಆಕರ್ಷಣೆಗೆ ಕಾರಣವಾಗಿದೆ. ಸಾರ್ವಜನಿಕರ ಬೆರಗುಗಣ್ಣಿನಿಂದ ಅನ್ಮೋಲ್ ನನ್ನ ನೋಡ್ತಿದ್ದಾರೆ. ಮೀರತ್ ಸೇರಿ ಸುತ್ತಮುತ್ತಲಿನ ವ್ಯವಸಾಯ ಸಂಬಂಧಿತ ಕಾರ್ಯಕ್ರಮ , ಪುಷ್ಕರ್ ಮೇಳ ಹಾಗೂ ಅನ್ನದಾತರ ಸಮಾವೇಶದಲ್ಲಿ ಅನ್ಮೋಲ್ ಗೆ ಭಾರಿ ಬೇಡಿಕೆ ಬಂದಿದೆ. ಇನ್ನು ಈ ದೈತ್ಯ ಕೋಣವನ್ನು ಸಾಕುವುದು ಅಷ್ಟೇ ದುಬಾರಿಯಂತೆ. ಇದಕ್ಕೆ ಹಣ್ಣು, ಮೊಟ್ಟೆ, ಜೋಳ, ಸೋಯಾಬೀನ್, ದೇಸಿ ತುಪ್ಪ, ಹಾಲು, ಎಣ್ಣೆ ಕೇಕ್ ಮತ್ತು ಹಸಿರು ಮೇವನ್ನು ತಿನ್ನಿಸಲಾಗುತಂತೆ. ಇದರ ಆಹಾರಕ್ಕಾಗಿಯೇ ದಿನಕ್ಕೆ 1 ಸಾವಿರದಿಂದ 1,500 ರೂಪಾಯಿ ಖರ್ಚಾಗುತ್ತದೆ ಎನ್ನಲಾಗುತ್ತಿದೆ.
‘ಅನ್ಮೋಲ್’ ಕೋಣದ ವೀರ್ಯಾಣು ಗೂ ಸಖತ್ ಡಿಮ್ಯಾಂಡ್ ಬಂದಿದ್ದು, ಬ್ರೀಡ್ ವೃದ್ಧಿಪಡಿಸಲು ಜನರು ಅನ್ಮೋಲ್ ಮಾಲೀಕರ ದುಂಬಾಲು ಬಿದ್ದಿದ್ದಾರೆ.

Share This Article
Leave a comment