ಚಿಕ್ಕಮಗಳೂರು: ಶೃಂಗೇರಿ ಬಳಿಕ ಹೊರನಾಡಲ್ಲೂ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ. ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆಯನ್ನು ಕಡ್ಡಾಯಗೊಳಿಸಲಾಗಿದೆ.
ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ನಿರ್ದಿಷ್ಟ ಉಡುಪುಗಳನ್ನು ನಿಗದಿಗೊಳಿಸಿ ದೇವಸ್ಥಾನದ ಆಡಳಿತ ಮಂಡಳಿ ಸಾರ್ವಜನಿಕವಾಗಿ ಪ್ರಕಟಣೆ ನೀಡಿದೆ. ಅದರಂತೆ, ಪುರುಷರು ಪ್ಯಾಂಟ್, ಪಂಚೆ, ಶಲ್ಯ, ಶರ್ಟ್ ಧರಿಸುವುದು ಇನ್ನು ಕಡ್ಡಾಯವಾಗಲಿದೆ. ಸ್ತ್ರೀಯರು ಸೀರಿ ಮತ್ತು ಚೂಡಿದಾರ್ ಮಾತ್ರ ಧರಿಸಬೇಕು. ಸಾಂಪ್ರದಾಯಿಕ ಉಡುಗೆ ತೊಟ್ಟು ಬರದಿದ್ದರೆ ದೇವಸ್ಥಾನಕ್ಕೆ ಪ್ರವೇಶವಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.
ಇನ್ನಮೇಲೆ ಅನ್ನಪೂರ್ಣೇಶ್ವರಿ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯ
Leave a comment
Leave a comment