ಸ್ಯಾಂಡಲ್ವುಡ್ ನಟ, ಬಿಗ್ ಬಾಸ್ ಕನ್ನಡ ನಿರೂಪಕ ಕಿಚ್ಚ ಸುದೀಪ್ ತನ್ನ ತಾಯಿಯನ್ನು ಕಳೆದುಕೊಂಡಿದ್ದಾರೆ. ಕಳೆದ ಆದಿತ್ಯವಾರದಂದು ಬೆಳಗ್ಗೆ ಕಿಚ್ಚನ ಅಮ್ಮ ಇಹಲೋಕ ತ್ಯಜಿಸಿದ್ದಾರೆ. ಸದ್ಯ ಅಮ್ಮನ ನೆನಪಲ್ಲೇ ಉಳಿದಿರುವ ನಟ ಈ ವಾರದ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಗೈರಾಗಲಿದ್ದಾರೆ.
ಹೌದು. ಕಿಚ್ಚ ಸುದೀಪ್ ವಾರದ ಕೊನೆಯಲ್ಲಿ ಬಂದು ಪಂಚಾಯ್ತಿ ನಡೆಸುತ್ತಿದ್ದರು. ಆದರೆ ತಾಯಿ ಸರೋಜಾ ಅವರನ್ನು ಕಳೆದುಕೊಂಡ ಸುದೀಪ್ ಈ ವಾರಾಂತ್ಯದಲ್ಲಿ ನಿರೂಪಣೆಗೆ ಗೈರಾಗಲಿದ್ದಾರೆ. ಹಾಗಾಗಿ ಈ ವಾರದ ಬಿಗ್ ಬಾಸ್ ಮನೆಯೆ ಇಬ್ಬರು ಹೊಸ ಅತಿಥಿಗಳು ಭೇಟಿ ನೀಡಲಿದ್ದಾರೆ.
ಇಂದು ನಿರ್ದೇಶಕ ಯೋಗರಾಜ್ ಭಟ್ಟರು ಬಿಗ್ ಬಾಸ್ ಮನೆಯೊಳಕ್ಕೆ ಕಾಲಿಟ್ಟಿದ್ದಾರೆ. ಸ್ಪರ್ಧಿಗಳ ಜೊತೆಗೆ ಮಾತು, ನಗು, ಚರ್ಚೆ ಮಾಡಿದ್ದಾರೆ. ನಾಳೆ ಸೃಜನ್ ಲೋಕೇಶ್ ಬಿಗ್ ಬಾಸ್ ಮನೆಯೊಳಕ್ಕೆ ಎಂಟ್ರಿ ನೀಡಲಿದ್ದಾರೆ. ಆ ಮೂಲಕ ಕಿಚ್ಚನ ವಾರಾಂತ್ಯದ ಜವಾಬ್ದಾರಿಯನ್ನು ಇವರಿಬ್ಬರು ತುಂಬಲಿದ್ದಾರೆ. ಜೊತೆಗೆ ವೀಕ್ಷಕರಿಗೆ ಮನೋರಂಜನೆ ನೀಡಲಿದ್ದಾರೆ.
ಸುದೀಪ್ ಅವರ ತಾಯಿ ಸರೋಜಾ ಸಂಜೀವ್ರವರು ಕಳೆದ ಅದಿತ್ಯವಾರದಂದು ಬೆಳಗ್ಗಿನ ಜಾವ ನಿಧನರಾದರು. ವಯೋಸಹಜ ಕಾಯಿಲೆಯಿಂದಾಗಿ ನಿಧನರಾದರು. ಸರೋಜಾರವರು ಪತಿ ಸಂಜೀವ್, ಮತ್ತು ಕಿಚ್ಚ ಸುದೀಪ್ ಸೇರಿ ಮೂವರು ಮಕ್ಕಳನ್ನು ಅಗಲಿದ್ದಾರೆ.