ಆ ಒಂದು ಸನ್ನೆ‌ ದರ್ಶನ್ ಗೆ ಮುಳುವಾಗುತ್ತಾ?

public wpadmin

ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಬಂಧನಕ್ಕೆ ಒಳಗಾಗಿ ಮೂರು ತಿಂಗಳು ಕಳೆದಿದೆ. ಈವರೆಗೆ ಅವರ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿಲ್ಲ. ಒಂದುವೇಳೆ ಅರ್ಜಿ ಸಲ್ಲಿಕೆ ಆದರೂ ಜಾಮೀನು ಸಿಗೋದು ಅಷ್ಟು ಸುಲಭವಲ್ಲ . ಇದಕ್ಕೆ ಕಾರಣ ಅವರು ಮಾಡಿಕೊಳ್ಳುತ್ತಿರುವ ಎಡವಟ್ಟುಗಳು.

ದರ್ಶನ್ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ಪೊಲೀಸರಿಗೆ ದಿನಕ್ಕೊಂದು ಅಸ್ತ್ರ ಸಿಗುತ್ತಿದೆ. ಈ ಸಮಸ್ಯೆಗಳನ್ನು ಸ್ವತಃ ದರ್ಶನ್ ಅವರೇ ಸೃಷ್ಟಿಸಿಕೊಳ್ಳುತ್ತಿದ್ದಾರೆ. ಹೌದು, ದರ್ಶನ್ ಜಾಮೀನು ಆಕ್ಷೇಪಣೆಗೆ ಪರಪ್ಪನ ಅಗ್ರಹಾರದ ರಾಜಾಥಿತ್ಯ ಪ್ರಕರಣ ಪ್ರಮುಖ ಅಸ್ತ್ರ ಆಗಲಿದೆ. ಜೈಲಿನಲ್ಲಿ ಸಿಗರೇಟ್, ಟೀ ಕಪ್, ರೌಡಿಶೀಟರ್ ಜೊತೆ ಕುಳಿತಿರುವ ಬಗ್ಗೆ ನ್ಯಾಯಾಲಯಕ್ಕೆ ಪೊಲೀಸರು ತಿಳಿಸಲಿದ್ದಾರೆ. ದರ್ಶನ್ ಗೆ ಎಷ್ಟು ಪ್ರಭಾವ ಇದೆ ಎಂಬುದನ್ನು ಕೋರ್ಟ್‌ಗೆ ಮನದಟ್ಟು ಮಾಡಿಕೊಳ್ಳಲು ಫೋಟೋ ಸಹಕಾರಿ ಆಗಲಿದೆ. ಜೈಲಿನಿಂದ ರೌಡಿಶೀಟರ್ ಮಗನೊಬ್ಬನಿಗೆ ದರ್ಶನ್ ವಿಡಿಯೋ ಕಾಲ್ ಮಾಡಿದ್ದರು. ಇದನ್ನೂ ಪೊಲೀಸರು ಪ್ರಮುಖ ಅಂಶವಾಗಿ ಉಲ್ಲೇಖ ಮಾಡಲಿದ್ದಾರೆ.
ಇಷ್ಟೆಲ್ಲ ಮಾಡಿದ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಅಲ್ಲಿಯೂ ಅವರು ಬುದ್ಧಿ ಕಲಿತಿಲ್ಲ. ಬಳ್ಳಾರಿ ಜೈಲಿನಲ್ಲಿಯ ದರ್ಶನ್ ಅಸಭ್ಯ ವರ್ತನೆ ತೋರುತ್ತಿದ್ದಾರೆ. ಕ್ಯಾಮೆರಾಗಳ ಮುಂದೆ ಮಧ್ಯದ ಬೆರಳು ತೋರಿಸಿದ್ದಾರೆ. ಆದರೆ, ಫ್ಯಾನ್ಸ್ ಇದನ್ನೂ ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅದು ವಿಘ್ನ ಹರ ಮುದ್ರ ಎಂದು ದರ್ಶನ್ ಪರ ಫ್ಯಾನ್ಸ್ ಹೇಳುತ್ತಿದ್ದಾರೆ. ಆದರೆ, ಇದನ್ನು ಎಲ್ಲರೂ ಒಪ್ಪುತ್ತಿಲ್ಲ. ಈಗಾಗಲೇ ಸಾಕ್ಷ್ಯ ನಾಶಕ್ಕೆ ದರ್ಶನ್ ಹಲವು ಪ್ರಯತ್ನ ಮಾಡಿದ್ದಾರೆ. ‘ಹೊರಗೆ ಬಂದರೆ ಮತ್ತೆ ಪ್ರಭಾವ ಬಳಸಿ ಸಾಕ್ಷ್ಯ ನಾಶಕ್ಕೆ ಯತ್ನ ಮಾಡಬಹುದು. ಹೀಗಾಗಿ ದರ್ಶನ್ ಗೆ ಜಾಮೀನು ನೀಡಬಾರದು’ ಎಂದು ಪೊಲೀಸರು ಆಕ್ಷೇಪಣೆ ಸಲ್ಲಿಸೋ ಸಾಧ್ಯತೆ ಇದೆ.

Share This Article
Leave a comment