ಆತ್ಮಹತ್ಯೆಯಂತಹ ಆಲೋಚನೆ ತಡೆಗಟ್ಟುವುದು ಹೇಗೆ? 

public wpadmin

ಸಾಯುವುದಕ್ಕೆ ಹಲವು ಕಾರಣಗಳಿರಬಹುದು, ಆದರೆ ಬದುಕುವುದಕ್ಕೆ ಒಂದೇ ಕಾರಣವಿದೆ. ಇತ್ತೀಚೆಗಿನ ದಿನಗಳಲ್ಲಿ ಪ್ರೀತಿ ಪ್ರೇಮ, ಆರ್ಥಿಕ ಸಮಸ್ಯೆ, ಕೌಟಂಬಿಕ ಸಮಸ್ಯೆ, ಉದ್ಯಮದಲ್ಲಿ ನಷ್ಟ, ಮಾನಸಿಕ ಒತ್ತಡ, ಮಾದಕ ವಸ್ತುಗಳ ಚಟ, ಅನಾರೋಗ್ಯದ ಸಮಸ್ಯೆಗಳು, ಪೋಷಕರ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲಿ ಇತ್ತೀಚಿನ ದಿನಗಳಲ್ಲಿ ಓದುವ ಮಕ್ಕಳಲ್ಲಿ ಆತ್ಮಹತ್ಯೆಯಂತಹ ಆಲೋಚನೆಗಳು ಹೆಚ್ಚಾಗುತ್ತಿದೆ. ಈ ಆಲೋಚನೆಗಳನ್ನು ತಡೆಯುವ ಸಲುವಾಗಿ ಸೆಪ್ಟೆಂಬರ್ 10 ರಂದು ವಿಶ್ವ ಆತ್ಮಹತ್ಯೆ ತಡೆ ದಿನವನ್ನು ಆಚರಿಸಲಾಗುತ್ತಿದೆ.

ಮಕ್ಕಳಲ್ಲಿ ಆತ್ಮಹತ್ಯೆಯಂತಹ ಆಲೋಚನೆಯನ್ನು ತಡೆಗಟ್ಟುವಲ್ಲಿ ಪೋಷಕರ ಪಾತ್ರ
ಮಕ್ಕಳು ಸೂಕ್ಷ್ಮ ಮನಸ್ಸನ್ನು ಹೊಂದಿರುತ್ತಾರೆ. ಹೀಗಾಗಿ ಶಾಲೆಯಲ್ಲಿ ಶೈಕ್ಷಣಿಕವಾಗಿ ಹಿಂದೆ ಬಿದ್ದರೆ, ಅಥವಾ ಯಾವುದರಲ್ಲಾದರೂ ಸೋಲು ಕಂಡರೆ ಅವರನ್ನು ಅತಿಯಾಗಿ ನಿಂದಿಸುವುದು ಸರಿಯಲ್ಲ. ಮಾನಸಿಕ ಬೆಂಬಲ ನೀಡುವುದರೊಂದಿಗೆ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಬೇಕು. ಮಕ್ಕಳನ್ನು ಅತಿಯಾಗಿ ಶಿಕ್ಷಿಸುವುದನ್ನು ನಿಲ್ಲಿಸಿ, ಪ್ರೀತಿಯಿಂದ ತಿಳಿ ಹೇಳುವುದು ಒಳ್ಳೆಯದು.
ಮಕ್ಕಳಿಗೆ ಯಾವುದೇ ಸಮಸ್ಯೆಯಿದ್ದರೂ ತಮ್ಮ ಪೋಷಕರ ಬಳಿ ಆ ಸಮಸ್ಯೆಯ ಕುರಿತು ಮುಕ್ತವಾಗಿ ಮಾತನಾಡಲು ಸಾಧ್ಯವಾಗುವ ವಾತಾವರಣವನ್ನು ಪೋಷಕರು ಸೃಷ್ಟಿಸಿಕೊಡಬೇಕು.
ಈಗಿನ ಫೋಷಕರು ಮಕ್ಕಳ ಮೇಲೆ ಹೆಚ್ಚು ಒತ್ತಡ ಹಾಕುತ್ತಿದ್ದಾರೆ. ಮಕ್ಕಳಿಗೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ, ಶೈಕ್ಷಣಿಕ ಬೆಳವಣಿಗೆ ಸ್ವಲ್ಪ ಇಳಿಕೆ ಕಂಡರೆ ಒತ್ತಡ ಹಾಕುತ್ತಾರೆ. ಇಂತಹ ಸಮಯದಲ್ಲಿ ಮಕ್ಕಳಿಗೆ ಧೈರ್ಯ ತುಂಬಿ ಮುಂಬರುವ ಪರೀಕ್ಷೆಗೆ ಒಳ್ಳೆಯ ತಯಾರಿ ನಡೆಸು ಎಂದು ಪ್ರೋತ್ಸಾಹ ನೀಡುವುದು ಮುಖ್ಯ.
ಮಕ್ಕಳಿಗೂ ಕೂಡ ಭಾವನೆಗಳಿವೆ, ಹೀಗಾಗಿ ಫೋಷಕರಾದ ನೀವುಗಳು ಮಕ್ಕಳಿಗೆ ಭಾವನೆಯನ್ನು ವ್ಯಕ್ತಪಡಿಸಲು ಹಾಗೂ ಅವರಿಗೆ ಏನು ಅನಿಸುತ್ತದೆ ಅದನ್ನು ಹೇಳಲು ಅವಕಾಶ ಕೊಡಬೇಕು. ಇಲ್ಲದಿದ್ದರೆ ಮಾನಸಿಕವಾಗಿ ಕುಗ್ಗಿ ಆತ್ಮಹತ್ಯೆಯಂತಹ ಆಲೋಚನೆಗಳು ಬರಬಹುದು.
ಪ್ರತಿಯೊಬ್ಬ ಪೋಷಕರು ಮಕ್ಕಳ ದಿನಚರಿಯ ಬಗ್ಗೆ ಗಮನವಹಿಸಬೇಕು. ಊಟ, ಪಾಠ, ನಿದ್ರೆ ಮತ್ತು ಇತರೆ ಚಟುವಟೆಕೆಗಳ ಬಗ್ಗೆ ಗಮನ ಹರಿಸದೇ ಹೋದರೆ ಮಕ್ಕಳ ಭವಿಷ್ಯವು ಹಾಳಾಗುತ್ತದೆ. ಅದಲ್ಲದೇ ಕೆಟ್ಟ ಆಲೋಚನೆಗಳಿಗೂ ಕೈ ಹಾಕುವ ಸಾಧ್ಯತೆ ಹೆಚ್ಚಿರುತ್ತದೆ.

Share This Article
Leave a comment